ಗೌತಮ್ ಗಂಭೀರ್ ಮನೆಗೆ ಹೊಸ 'ಅತಿಥಿಯ' ಆಗಮನ

Update: 2017-06-22 11:32 GMT

ಹೊಸದಿಲ್ಲಿ, ಜೂ.22: ಭಾರತದ ಹಿರಿಯ ಕ್ರಿಕೆಟಿಗ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಗುರುವಾರ ಎರಡನೆ ಮಗುವಿನ ತಂದೆಯಾಗಿದ್ದಾರೆ. ಗಂಭೀರ್ ಪತ್ನಿ ಎರಡನೆ ಹೆಣ್ಣುವಿಗೆ ಜನ್ಮ ನೀಡಿದ್ದಾರೆ.

35ರ ಹರೆಯದ ಕ್ರಿಕೆಟಿಗ ಗಂಭೀರ್ ತನ್ನ ಟ್ವಿಟರ್ ಪೇಜ್‌ನಲ್ಲಿ ತಾನು ಎರಡನೆ ಮಗುವಿಗೆ ತಂದೆಯಾದ ವಿಷಯವನ್ನು ಬಹಿರಂಗಪಡಿಸಿದರು. ಗಂಭೀರ್‌ರ ಮೊದಲ ಮಗಳು ನವಜಾತ ಶಿಶುವನ್ನು ಹಿಡಿದುಕೊಂಡಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.

ನಮ್ಮ ಕುಟುಂಟಕ್ಕೆ ಎರಡನೆ ದೇವರ ಆಗಮನವಾಗಿದೆ. ಈ ದೇವರು ನಮ್ಮ ಮನೆ ಬೆಳಗಲಿದ್ದಾರೆ. ವಿಶ್ವಕ್ಕೆ ಆಗಮಿಸಿರುವ ಸಣ್ಣ ದೇವಧೂತನಿಗೆ ಸ್ವಾಗತ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಗಂಭೀರ್ ಅವರು 2011ರ ಅಕ್ಟೋಬರ್‌ನಲ್ಲಿ ನಟಾಶಾರನ್ನು ವಿವಾಹವಾಗಿದ್ದರು. ಕೆಲವು ವರ್ಷಗಳ ಹಿಂದೆ ಈ ದಂಪತಿಗೆ ಆಝೀನ್ ಹೆಸರಿನ ಹೆಣ್ಣು ಮಗು ಜಯಿಸಿತ್ತು.

ತಂದೆಯಾಗಿರುವ ಗಂಭೀರ್‌ಗೆ ಸಹ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News