ಅನಿಲ್ ಕುಂಬ್ಳೆ ರಾಜೀನಾಮೆಯ ನಂತರ ಟ್ವಿಟ್ಟರ್ ನಲ್ಲಿ ಕೊಹ್ಲಿ ಮಾಡಿದ್ದೇನು ಗೊತ್ತೇ?

Update: 2017-06-22 18:27 GMT

ಹೊಸದಿಲ್ಲಿ, ಜೂ.22: ಕೊಹ್ಲಿ-ಅನಿಲ್ ಕುಂಬ್ಳೆ ನಡುವಿನ ಅಸಮಾಧಾನಕ್ಕೆ ಸಾಕ್ಷಿಯೆಂಬಂತೆ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ನಿವೃತ್ತಿ ಘೋಷಿಸಿರುವಂತೆಯೇ ಕ್ರಿಕೆಟಿಗ ವಿರಾಟ್ ಕೊಹ್ಲಿ ತಾವು ವರ್ಷದ ಹಿಂದೆ ಹಾಕಿದ್ದ ಟ್ವಿಟ್ಟರ್  ಪೋಸ್ಟೊಂದನ್ನು ಡಿಲಿಟ್ ಮಾಡಿದ್ದಾರೆ.

2016ರ ಜೂನ್ ನಲ್ಲಿ ಕುಂಬ್ಳೆ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾಗ  ಪೋಸ್ಟ್ ಮಾಡಿದ್ದ, “ಅನಿಲ್ ಕುಂಬ್ಳೆಯವರಿಗೆ ಹೃದಯಾಂತರಾಳದ ಸ್ವಾಗತ. ನಿಮ್ಮ ಮುಂದಾಳತ್ವವನ್ನು ಎದುರು ನೋಡುತ್ತಿದ್ದೇವೆ” ಎಂಬ ಟ್ವೀಟನ್ನು ಕೊಹ್ಲಿ ತೆಗೆದು ಹಾಕಿದ್ದಾರೆ.

ಕೊಹ್ಲಿಯೊಂದಿಗಿನ ಅಸಮಾಧಾನದ ನಂತರ ಕುಂಬ್ಳೆ ತನ್ನ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಸಮಾಧಾನದ ವರದಿಯನ್ನು ಕೊಹ್ಲಿ ತಳ್ಳಿಹಾಕಿದ್ದರಾದರೂ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಸೋಲಿನ ನಂತರ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ.

ಕುಂಬ್ಳೆ ಕಳೆದ ವರ್ಷದ ಜೂನ್‌ನಲ್ಲಿ ಭಾರತದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು. ಕುಂಬ್ಳೆ ಮಾರ್ಗದರ್ಶನದಲ್ಲಿ ಭಾರತ ಸ್ವದೇಶದಲ್ಲಿ ಆಡಿರುವ 13 ಟೆಸ್ಟ್‌ಗಳಲ್ಲಿ 10ರಲ್ಲಿ ಜಯ, ಎರಡರಲ್ಲಿ ಡ್ರಾ ಸಾಧಿಸಿತ್ತು. ಒಂದು ಪಂದ್ಯದಲ್ಲಿ ಸೋತಿತ್ತು. ವೆಸ್ಟ್‌ಇಂಡೀಸ್‌ನಲ್ಲಿ ಸುಲಭವಾಗಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.

ಭಾರತದ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ತಕ್ಷಣ ಟ್ವೀಟ್ ಮಾಡಿದ್ದ ಕುಂಬ್ಳೆ, ನಾಯಕ ನನ್ನ ಕಾರ್ಯಶೈಲಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ...ಈ ಹಿನ್ನೆಲೆಯಲ್ಲಿ ಜವಾಬ್ದಾರಿಯನ್ನು ಸಿಎಸಿ ಹಾಗೂ ಬಿಸಿಸಿಐಗೆ ಹಸ್ತಾಂತರಿಸಲು ಬಯಸಿದ್ದೇನೆ ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News