ಕುಂಬ್ಳೆ ಆರೋಪಕ್ಕೆ ಇಲ್ಲಿದೆ ಕೊಹ್ಲಿ ಪ್ರತಿಕ್ರಿಯೆ

Update: 2017-06-22 17:30 GMT

ಹೊಸದಿಲ್ಲಿ, ಜೂ.22: ‘‘ಅನಿಲ್ ಭಾಯ್ ಕೋಚ್ ಹುದ್ದೆಯಿಂದ ದೂರ ಸರಿಯುವ ನಿರ್ಧಾರ ಕೈಗೊಂಡರು. ನಾವು ಅವರ ನಿರ್ಧಾರವನ್ನು ಗೌರವಿಸಬೇಕಾಗಿದೆ’’ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ  ಶುಕ್ರವಾರ  ನಡೆಯಲಿದ್ದು ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.

 ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ವೇಳೆ ಕೊಹ್ಲಿ ಅವರು ಕುಂಬ್ಳೆ ವಿಚಾರದಲ್ಲಿ ವೌನವಾಗಿದ್ದರು. ತಮಗೆ ಕುಂಬ್ಳೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಯಾವುದೇ ಹೇಳಿಕೆ ನೀಡಿರಲಿಲ್ಲ.

ಚಾಂಪಿಯನ್ಸ್ ಟ್ರೋಫಿ ಬಳಿಕ ಅನಿಲ್ ಕುಂಬ್ಳೆ ತಂಡದ ಕೋಚ್ ಹುದ್ದೆ ತೊರೆಯುವುದು ಎಲ್ಲರಿಗೂ ಗೊತ್ತಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

‘‘ಕಳೆದ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ 11 ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದೆ. ಆದರೆ ಡ್ರೆಸ್ಸಿಂಗ್ ರೂಂನ ಏನು ನಡೆಯುತ್ತದೆ ಎನ್ನು ವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ನಾವು ಮೂರು-ನಾಲ್ಕು ವರ್ಷಗಳಿಂದ ಡ್ರೆಸ್ಸಿಂಗ್ ರೂಂ ಗುಟ್ಟನ್ನು ಬಹಿರಂಗಪಡಿಸದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ತಂಡದ ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿದ್ದಾರೆ ’’ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

"ಕ್ರಿಕೆಟಿಗನಾಗಿ  ನಾನು ಅವರನ್ನು ಗೌರವಿಸುವೆ. ಅವರು  ಹಲವು ವರುಷಗಳ ಕಾಲ ಆಡಿ ದೇಶದ ಕ್ರಿಕೆಟಿಗೆ ನೀಡಿರುವ  ಕೊಡುಗೆಯನ್ನು ಗೌರವಿಸುವೆ'' ಎಂದು ಕೊಹ್ಲಿ ಹೇಳಿದ್ಧಾರೆ.

ಕುಂಬ್ಳೆ ಆರಂಭದಲ್ಲಿ ತಂಡದ ಜೊತೆ ವೆಸ್ಟ್ ಇಂಡೀಸ್ ಸರಣಿಗೆ ತೆರಳಲು ಒಪ್ಪಿಕೊಂಡಿದ್ದರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ  ಅವರು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) , ಬಿಸಿಸಿಐ ಹಂಗಾಮಿ  ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಸಿಇಓ ರಾಹುಲ್ ಚೌಧರಿಯನ್ನು ಭೇಟಿಯಾದ ಬಳಿಕ ಕೋಚ್ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News