ಕ್ರಿಕೆಟ್ ನಂತರ ಬಾಕ್ಸಿಂಗ್ ಆಯ್ತು, ಇದೀಗ ಹೊಸ ಸಾಹಸಕ್ಕೆ ಕೈಹಾಕಿದ ಫ್ಲಿಂಟಾಫ್

Update: 2017-06-22 17:02 GMT

ಲಂಡನ್, ಜೂ.22: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರೂ ಫ್ಲಿಂಟಾಫ್ ಆಲ್ ರೌಂಡರ್ ಆಗಿ ಮಿಂಚಿದ್ದವರು. 79 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಫ್ಲಿಂಟಾಫ್ 2005ರ ಆ್ಯಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಟ ಪ್ರಶಸ್ತಿಗೆ ಪಾತ್ರರಾಗಿದ್ದರು. ನಂತರ ಕ್ರಿಕೆಟ್ ತೊರೆದು ಬಾಕ್ಸಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಇದರಲ್ಲೂ ಯಶಸ್ವಿಯಾಗಿರುವ ಫ್ಲಿಂಟಾಫ್ ಚಾನೆಲ್ ಒಂದರಲ್ಲಿ ಪ್ರಸಾರವಾಗುವ ಲೈವ್ ಮ್ಯೂಸಿಕ್ ಶೋನಲ್ಲಿ ಪ್ರದರ್ಶನ ನೀಡಲಿದ್ದಾರೆ.

ಹಿಟ್ ಟಿವಿಯಲ್ಲಿ ನವೆಂಬರ್ ನಲ್ಲಿ ಪ್ರಶಸ್ತಿ ವಿಜೇತ ಲೇಖಕ ಕೇ ಮೆಲ್ಲರ್ ಸಾರಥ್ಯದಲ್ಲಿ ಈ ಶೋ ನಡೆಯಲಿದೆ. ಈ ಹಿಂದೆ ಫ್ಲಿಂಟಾಫ್ “ಲವ್, ಲೈಸ್ ಆ್ಯಂಡ್ ರೆಕಾರ್ಡ್ಸ್” ಧಾರವಾಹಿಯಲ್ಲೂ ಬಣ್ಣ ಹಚ್ಚಿದ್ದರು.

“ಟಿವಿ ಸೀರಿಸನ್ನು ನಾನು ಇಷ್ಟಪಡುತ್ತೇನೆ. ಸಂಗೀತವು ಜನರಿಗೆ ಹೆಚ್ಚು ಮುದ ನೀಡುತ್ತದೆ, ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News