ಏಗಾನ್ ಟೆನಿಸ್ ಚಾಂಪಿಯನ್‌ಶಿಪ್: ಬೋಪಣ್ಣ ಜೋಡಿ ಸೆಮಿ ಫೈನಲ್‌ಗೆ

Update: 2017-06-22 18:13 GMT

ಬರ್ಮಿಂಗ್‌ಹ್ಯಾಮ್, ಜೂ.22: ಭಾರತದ ಟೆನಿಸ್ ಪಟು ರೋಹನ್ ಬೋಪಣ್ಣ ಅವರು ತನ್ನ ಕ್ರೊಯೇಷಿಯದ ಜೊತೆಗಾರ ಇವಾನ್ ಡೊಡಿಗ್ ಜೊತೆಗೂಡಿ ಏಗಾನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ನಡೆದ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೋ-ಕ್ರೊಯೇಷಿಯ ಜೋಡಿ ಆಸ್ಟ್ರೇಲಿಯ-ಫಿನ್‌ಲೆಂಡ್‌ನ ಜಾನ್ ಪೀರ್ಸ್‌ ಹಾಗೂ ಹೆನ್ರಿ ಕಾಂಟಿನೆನ್‌ರನ್ನು 7-6, 4-6, 10-2 ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದೆ.

ಬೋಪಣ್ಣ ಹಾಗೂ ಡೊಡಿಗ್ ಸೆಮಿ ಫೈನಲ್‌ನಲ್ಲಿ ಫ್ರೆಂಚ್ ಜೋಡಿ ಜುಲಿಯೆನ್ ಬೆನ್ನೆಟೆವು-ಎಡ್ವರ್ಡ್ ಹಾಗೂ ರೋಜರ್ ವಾಸೆಲಿನ್ ಅಥವಾ ಅಮೆರಿಕದ ಬ್ರಯಾನ್ ಬ್ರದರ್ಸ್‌ರನ್ನು ಎದುರಿಸುವ ಸಾಧ್ಯತೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News