ಅಫ್ಘಾನಿಸ್ತಾನ, ಐರ್ಲೆಂಡ್‌ಗೆ ಟೆಸ್ಟ್ ತಂಡ ಸ್ಥಾನಮಾನ

Update: 2017-06-22 18:14 GMT

ಲಂಡನ್, ಜೂ.22: ಐರ್ಲೆಂಡ್ ಮತ್ತು ಅಫ್ಘಾನಿಸ್ತಾನಕ್ಕೆ ಟೆಸ್ಟ್ ಆಡುವ ತಂಡ ಸ್ಥಾನಮಾನ ದೊರೆತಿದೆ.

 ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ವಾರ್ಷಿಕ ಅಧಿವೇಶನದಲ್ಲಿ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನಕ್ಕೆ ಟೆಸ್ಟ್ ತಂಡದ ಸ್ಥಾನಮಾನ ನೀಡಲಾಗಿದೆ. ಈ ಎರಡು ದೇಶಗಳು ಐದು ದಿನಗಳ ಟೆಸ್ಟ್ ಆಡುವ ಅರ್ಹತೆ ಪಡೆದಿದೆ. ಬಾಂಗ್ಲಾದೇಶ 17 ಹಿಂದೆ ಟೆಸ್ಟ್ ತಂಡದ ಸ್ಥಾನಮಾನ ಪದ ಕೊನೆಯ ತಂಡವಾಗಿ ತ್ತು. 2000ರಲ್ಲಿ ಬಾಂಗ್ಲಾದೇಶಕ್ಕೆ ಈ ಸ್ಥಾನಮಾನ ನೀಡಲಾಗಿತ್ತು.

1877ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಆಡಿತ್ತು. ಈ ಎರಡು ತಂಡಗಳು ಮೊದಲ ಬಾರಿ ಟೆಸ್ಟ್ ಸ್ಥಾನಮಾನ ಪಡೆದಿತ್ತು. ಬಳಿಕ ಈ ತಂಡಗಳ ಸಾಲಿಗೆ ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್, ವೆಸ್ಟ್‌ಇಂಡೀಸ್, ಭಾರತ, ಪಾಕಿಸ್ತಾನ, ಶ್ರೀಲಂಕಾ, ಮತ್ತು ಝಿಂಬಾಬ್ವೆ ತಂಡಗಳು ಸೇರ್ಪಡೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News