‘ಬಾಸ್’ನಂತೆ ವರ್ತಿಸುವ ಕೊಹ್ಲಿಗೆ ಕೋಚ್ ಅಗತ್ಯವಿಲ್ಲ: ಪ್ರಸನ್ನ

Update: 2017-06-23 17:05 GMT

ಕೋಲ್ಕತಾ,ಜೂ.23: ‘‘ಹಾಲಿ ಕೋಚ್ ವಿರಾಟ್ ಕೊಹ್ಲಿ ತಾನೊಬ್ಬ ‘ಬಾಸ್’ ಎಂದು ಭಾವಿಸಿದ್ದರೆ ಟೀಮ್ ಇಂಡಿಯಾಕ್ಕೆ ಕೋಚ್ ಇಲ್ಲದೇ ಇರುವುದು ಉತ್ತಮ’’ ಎಂದು ಭಾರತದ ಮಾಜಿ ಆಫ್-ಸ್ಪಿನ್ನರ್ ಎರ್ರಪಲ್ಲಿ ಪ್ರಸನ್ನ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

ಕೊಹ್ಲಿಯ ನಾಯಕತ್ವ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ ಪ್ರಸನ್ನ,‘‘ಕೊಹ್ಲಿ ನಿಸ್ಸಂಶಯವಾಗಿ ಓರ್ವ ಉತ್ತಮ ಆಟಗಾರ. ಆದರೆ, ಅವರು ಉತ್ತಮ ನಾಯಕ ಹೌದು, ಅಲ್ಲವೋ ಎಂದು ಗೊತ್ತಿಲ್ಲ. ಅನಿಲ್ ಕುಂಬ್ಳೆ ಅವರಂತಹ ಕ್ರಿಕೆಟ್ ದಂತಕತೆಗೆ ಗೌರವ ನೀಡದ ಕೊಹ್ಲಿ ಬಳಿ ಬಂಗಾರ್ ಹಾಗೂ ಶ್ರೀಧರ್‌ಗೆ ಆತ್ಮವಿಶ್ವಾಸದಿಂದ ಮಾತನಾಡುವ ಧೈರ್ಯವಿದೆ ಎಂದು ತನಗನಿಸುತ್ತಿಲ್ಲ. ಕುಂಬ್ಳೆಯಷ್ಟು ಅನುಭವಿಗಳು ಯಾರೂ ಇಲ್ಲ. ನನ್ನ ಪ್ರಕಾರ ತಂಡಕ್ಕೆ ಕೋಚ್ ಅಗತ್ಯವಿಲ್ಲ. ಕೇವಲ ದೈಹಿಕ ತರಬೇತಿದಾರರನ್ನು ನೇಮಿಸಿದರೆ ಸಾಕು. ಇಂತಹ ವರ್ತನೆಯ ನಾಯಕನಿಗೆ ಕೋಚ್‌ನ ಅಗತ್ಯ ಕಾಣುತ್ತಿಲ್ಲ’’ ಎಂದು ಕೊಹ್ಲಿ ನಡವಳಿಕೆಯ ಬಗ್ಗೆ 77ರ ಹರೆಯದ ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News