ಜುಲೈಗೆ ಸ್ಪರ್ಧಾತ್ಮಕ ಟೆನಿಸ್ ಗೆ ಶರಪೋವಾ ವಾಪಸ್

Update: 2017-06-23 17:43 GMT

ನ್ಯೂಪೋರ್ಟ್ ಬೀಚ್(ಅಮೆರಿಕ), ಜೂ.23: ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಜುಲೈನಲ್ಲಿ ನಡೆಯಲಿರುವ ವಿಶ್ವ ಟೀಮ್ ಟೆನಿಸ್‌ನ ಎರಡು ಪಂದ್ಯಗಳಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಲಿದ್ದಾರೆ.

 ಶರಪೋವಾ ಇತ್ತೀಚೆಗೆ 15 ತಿಂಗಳ ನಿಷೇಧದ ಬಳಿಕ ಡಬ್ಲ್ಯುಟಿಎ ಟೂರ್ ಪಂದ್ಯವನ್ನು ಆಡುವುದರೊಂದಿಗೆ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು.

ಶರಪೋವಾ ಜು.31 ರಂದು ಕ್ಯಾಲಿಫೋರ್ನಿಯದಲ್ಲಿ ಟೂರ್ನಮೆಂಟ್‌ನ್ನು ಆಡುವುದರೊಂದಿಗೆ ಟೆನಿಸ್ ಕೋರ್ಟ್‌ಗೆ ಮರಳುವ ಯೋಜನೆ ಹಾಕಿಕೊಂಡಿದ್ದರು. ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾ 179ನೆ ರ್ಯಾಂಕಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News