ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ

Update: 2017-06-23 18:15 GMT

ಪೋರ್ಟ್ ಆಫ್ ಸ್ಪೇನ್, ಜೂ.23: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿದೆ.
ಮಳೆಯಿಂದಾಗಿ ಆಟ ನಿಂತಾಗ ಭಾರತ 39.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿತ್ತು.

 ಅರ್ಧಶತಕ ಗಳಿಸಿರುವ ಆರಂಭಿಕ ದಾಂಡಿಗರಾದ ಅಜಿಂಕ್ಯ ರಹಾನೆ (62) ಮತ್ತು ಶಿಖರ್ ಧವನ್(87), ಆಲ್‌ರೌಂಡರ್ ಯುವರಾಜ್ ಸಿಂಗ್ (4) ಔಟಾಗಿದ್ದಾರೆ.ವಿರಾಟ್ ಕೊಹ್ಲಿ ಔಟಾಗದೆ 32 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ವೆಸ್ಟ್‌ಇಂಡಿಸ್‌ನ ಹೋಲ್ಡರ್, ಜೋಸೆಫ್ ಮತ್ತು ಬಿಶೂ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News