ಮಹಿಳಾ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 35 ರನ್‌ಗಳ ಜಯ
ಡರ್ಬಿ, ಜೂ.24: ಇಲ್ಲಿ ಆರಂಭಗೊಂಡ ಹನ್ನೊಂದನೆ ಆವೃತ್ತಿಯ ಮಹಿಳೆಯರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 35 ರನ್‌ಗಳ ಜಯ ಗಳಿಸಿದೆ.
ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 282 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ 47.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟಾಗಿದೆ.
ಭಾರತದ ದೀಪ್ತಿ ಶರ್ಮ (47ಕ್ಕೆ 3), ಶಿಖಾ ಪಾಂಡೆ (35ಕ್ಕೆ 2) ದಾಳಿಗೆ ಸಿಲುಕಿದ ಇಂಗ್ಲೆಂಡ್ ಗೆಲುವಿನ ದಡ ಸೇರುವಲ್ಲಿ ಎಡವಿತು.
ಇಂಗ್ಲೆಂಡ್ ಪರ ಫ್ರಾನ್ಸ್ ವಿಲ್ಸನ್(86) ಮತ್ತು ನಾಯಕಿ ಹೀತರ್ ನೈಟ್ (46) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಟಾಮಿ ಬೇವೌಂಟ್ (14), ಸಾರಾ ಟೇಲರ್(22), ನಥಾಲಿಯಾ ಸಿವರ್(18), ಕ್ಯಾಥರಿನ್ ಬ್ರಂಟ್(24) ಮತ್ತು ಆನಿಯಾ ಶ್ರುಬೊಸ್ಲೆ(11) ಎರಡಂಕೆಯ ಕೊಡುಗೆ ನೀಡಿದರು.
ಭಾರತ 281/3: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭಿಕ ಜೋಡಿ ಪೂನಮ್ ರಾವತ್(86), ಸ್ಮತಿ ಮಂಧಾನ(90), ಮಿಥಾಲಿ ರಾಜ್(71) ಮತ್ತು ಎಚ್.ಕೌರ್(24) ಇವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 281 ರನ್ ಗಳಿಸಿತ್ತು. ಭಾರತದ ಪರ ಗರಿಚ್ಠ ಸ್ಕೋರ್ ದಾಖಲಿಸಿದ ಸ್ಮತಿ ಮಂಧಾನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.