ಲಂಕಾ ಕೋಚ್ ಹುದ್ದೆ ತೊರೆದ ಫೋರ್ಡ್

Update: 2017-06-24 18:08 GMT

ಕೊಲಂಬೊ, ಜೂ.24: ಗ್ರಹಾಂ ಫೋರ್ಡ್ ಶ್ರೀಲಂಕಾ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

 ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿಫೋರ್ಡ್ ಕೋಚ್ ಹುದ್ದೆಯನ್ನು ಕಳೆದುಕೊಳ್ಳುವಂತಾಗಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪೋರ್ಡ್ ರಾಜೀನಾಮೆಯನ್ನು ಅಂಗೀಕರಿಸಿದ್ದು, ಲಂಕಾ ಕ್ರಿಕೆಟ್‌ಗೆ ಮೋಡಿ ನೀಡಿರುವ ಕೊಡುಗೆಯನ್ನು ಎಸ್‌ಎಲ್‌ಸಿ ಶ್ಲಾಘಿಸಿದೆ.

   ಫೀಲ್ಡಿಂಗ್ ಕೋಚ್ ನಿಕ್ ಪೊಥಸ್ ಅವರು ಮುಂಬರುವ ಝಿಂಬಾಂಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಪ್ರಧಾನ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News