ಭಾರತದ ಕೋಚ್ ಹುದ್ದೆಯ ಆಕಾಂಕ್ಷಿಯಲ್ಲ: ಜಯವರ್ಧನೆ
Update: 2017-06-26 22:57 IST
ಕೊಲಂಬೊ, ಜೂ.26: ಭಾರತದ ಕೋಚ್ ಹುದ್ದೆಗೆ ತಾನು ಆಕಾಂಕ್ಷಿಯಾಗಿದ್ದೇನೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿರುವ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ,ಇದೀಗ ತಾನು ಪೂರ್ಣಕಾಲಿಕ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಂತಹದ್ದೊಂದು ವದಂತಿ ಕೇಳಿ ನನಗೆ ಸಂತೋಷವಾಗಿದೆ. ಆದರೆ, ಸದ್ಯದಲ್ಲಿ ಯಾವುದೇ ರಾಷ್ಟ್ರೀಯ ತಂಡವೊಂದಕ್ಕೆ ಪೂರ್ಣಕಾಲಿಕ ಕೋಚ್ ಆಗುವ ಯೋಚನೆ ನನ್ನಲ್ಲಿಲ್ಲ. ನನ್ನ ಕೈಯ್ಯಲ್ಲಿರುವ ಕೆಲಸವನ್ನು ಮುಗಿಸುವತ್ತ ಗಮನ ನೀಡುವೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಹಾಗೂ ಖುಲ್ನಾ ತಂಡದಲ್ಲಿ ಹೆಚ್ಚು ವ್ಯಸ್ತನಾಗಿದ್ದೇನೆ ಎಂದು ಜಯವರ್ಧನೆ ತಿಳಿಸಿದ್ದಾರೆ.