×
Ad

ಜೀವನ್-ಮ್ಯಾಟ್ ರೆಡ್ ಜೋಡಿಗೆ ಸ್ಮರಣೀಯ ಜಯ

Update: 2017-06-26 23:13 IST

ಈಸ್ಟ್‌ಬೌರ್ನ್(ಇಂಗ್ಲೆಂಡ್), ಜೂ.26: ಭಾರತದ ಉದಯೋನ್ಮುಖ ಆಟಗಾರ ಜೀವನ್ ಹಾಗೂ ಮ್ಯಾಟ್ ರೆಡ್ ಜೋಡಿ ಎಟಿಪಿ ಏಗಾನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ರಿಯಾನ್ ಹ್ಯಾರಿಸನ್ ಹಾಗೂ ಮೈಕಲ್ ವೀನಸ್ ವಿರುದ್ಧ ಸ್ಮರಣೀಯ ಜಯ ಸಾಧಿಸಿದ್ದಾರೆ.

ರವಿವಾರ ಇಲ್ಲಿ ಸರಿಯಾಗಿ ಒಂದು ಗಂಟೆಕಾಲ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಶ್ರೇಯಾಂಕರಹಿತ ಜೀವನ್ ಹಾಗೂ ಅವರ ಆಸ್ಟ್ರೇಲಿಯದ ಜೊತೆಗಾರ ಮ್ಯಾಟ್ ರೆಡ್ ಮೂರನೆ ಶ್ರೇಯಾಂಕದ ಅಮೆರಿಕ-ಕಿವೀಸ್ ಜೋಡಿ ಹ್ಯಾರಿಸನ್-ವೀನಸ್‌ರನ್ನು 6-3, 3-6, 10-7 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ಜನವರಿಯಲ್ಲಿ ರೋಹನ್ ಬೋಪಣ್ಣರ ಜೊತೆಗೂಡಿ ಚೆನ್ನೈ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಜೀವನ್ ಪ್ರಮುಖ ಟೂರ್ನಿಯಲ್ಲಿ ಇನ್ನಷ್ಟೇ ಆಡಬೇಕಾಗಿದೆ. ಇದೀಗ ಗ್ರಾನ್‌ಸ್ಲಾಮ್ ಚಾಂಪಿಯನ್ ಜೋಡಿಯ ವಿರುದ್ಧ ಜಯ ಸಾಧಿಸಿರುವ ಜೀವನ್ ತನಗೆ ಈ ಅವಕಾಶ ಲಭಿಸಿರುವುದಕ್ಕೆ ಸಂಭ್ರಮವ್ಯಕ್ತಪಡಿಸಿದ್ದಾರೆ.

ಮ್ಯಾಟ್ ಹಾಗೂ ನಾನು ಚಾಲೆಂಜರ್ ಟೂರ್ನಿಯಿಂದಲೂ ಪರಸ್ಪರ ಅರ್ಥಮಾಡಿಕೊಂಡು ಆಡುತ್ತಿದ್ದೇವೆ. ಇಬ್ಬರು ಸಾಮರ್ಥ್ಯವೇನೆಂದು ನಮಗೆ ಗೊತ್ತಿದೆ. ಒತ್ತಡದಲ್ಲಿದ್ದಾಗ ಪರಸ್ಪರ ಬೆಂಬಲಿಸಿಕೊಳ್ಳುತ್ತೇವೆ ಎಂದು ಮುಂದಿನ ವಾರ ಆರಂಭವಾಗಲಿರುವ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಭಾಗವಹಿಸಲಿರುವ ಜೀವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News