ಮುಂದಿನ ಐದು ವರ್ಷಗಳಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದ ವಿವೋ
ಹೊಸದಿಲ್ಲಿ, ಜೂ.27: ಮೇಡ್ ಇನ್ ಚೀನಾಕ್ಕೆ ಗುಡ್ ಬೈ ಹೇಳಲು ಶೀಘ್ರವೇ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಆರಂಭವಾಗಲಿದೆ ಎಂಬ ವರದಿಯ ನಡುವೆ ಚೀನಾ ಮೊಬೈಲ್ ಉತ್ಪಾದನಾ ಕಂಪೆನಿ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಮುಂದಿನ ಐದು ವರ್ಷಗಳಿಗೆ(2018-2012) ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ಮುಂದುವರಿಸಿದೆ.
ಮುಂದಿನ ಐದು ವರ್ಷಗಳಿಗೆ ವಿವೋ ಶೀರ್ಷಿಕೆ ಪ್ರಾಯೋಜಕತ್ವವಹಿಸಿಕೊಳ್ಳಲು ಮತ್ತೊಮ್ಮೆ ನಮ್ಮೆಂದಿಗೆ ಕೈ ಜೋಡಿಸಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ವಿವೋ ಕಂಪೆನಿಯೊಂದಿಗೆ ನಮ್ಮ ಬಾಂಧವ್ಯ ಚೆನ್ನಾಗಿತ್ತು. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿಯಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಪೆಪ್ಸಿ ಕಂಪೆನಿ ಐದು ವರ್ಷಗಳ ಒಪ್ಪಂದವನ್ನು ಮೊಟಕುಗೊಳಿಸಿತ್ತು. 2015ರಲ್ಲಿ ವಿವೋ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ವಿವೋ ಮಾಡಿಕೊಂಡಿದ್ದ 2 ವರ್ಷ ಒಪ್ಪಂದ ಕೊನೆಗೊಂಡ ತಕ್ಷಣ ಬಿಸಿಸಿಐ 2017 ಹಾಗೂ 2022ರ ತನಕ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್‌ನ್ನು ಆಹ್ವಾನಿಸಿತ್ತು.