×
Ad

ವಿಶ್ವ ಚಾಂಪಿಯನ್‌ಶಿಪ್‌ನತ್ತ ಶ್ರೀಕಾಂತ್ ಚಿತ್ತ

Update: 2017-06-27 22:42 IST

ಹೈದರಾಬಾದ್, ಜೂ.27: ಸತತ ಸೂಪರ್ ಸರಣಿ ಪ್ರಶಸ್ತಿಯನ್ನು ಗೆದ್ದುಕೊಂಡು ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯಲು ಸಜ್ಜಾಗಿರುವ ಭಾರತದ ಶಟ್ಲರ್ ಕೆ.ಶ್ರೀಕಾಂತ್ ಪ್ರತಿಷ್ಠಿತ ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಧರಿಸುವತ್ತ ಚಿತ್ತವಿರಿಸಿದ್ದಾರೆ.

24ರ ಹರೆಯದ ಶ್ರೀಕಾಂತ್ ಕೆಲವೇ ದಿನಗಳಲ್ಲಿ ಇಂಡೋನೇಷ್ಯಾ ಓಪನ್ ಸೂಪರ್ ಸರಣಿ ಹಾಗೂ ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯನ್ನು ಜಯಿಸಿದ್ದರು. ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದಕ್ಕಾಗಿಯೇ ಆಡುತ್ತೇನೆ ಎಂದು ಹೇಳಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-10ನೆ ಸ್ಥಾನಕ್ಕೆ ವಾಪಸಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಅಗ್ರ-10ನೆ ಸ್ಥಾನಕ್ಕೆ ಮರಳುವ ಉದ್ದೇಶದಿಂದ ನಾನು ಮುಂಬರುವ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯನ್ನು ಆಡುತ್ತಿಲ್ಲ. ಆ ಟೂರ್ನಿಯ ಗೆಲುವು ಒಂದೇ ನನ್ನ ಗುರಿಯಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮಂಡಿನೋವಿನಿಂದ ಚೇತರಿಸಿಕೊಂಡ ಬಳಿಕ ಕಳೆದ ಎರಡು ವಾರದಲ್ಲಿ ಎರಡು ಪ್ರಶಸ್ತಿ ಗೆದ್ದುಕೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಶ್ರೀಕಾಂತ್, ಕಳೆದ ಎರಡು ವಾರ ನನ್ನ ಪಾಲಿಗೆ ಅಪೂರ್ವವಾಗಿತ್ತು. ನನಗೆ ಮಾತ್ರವಲ್ಲ ಎಚ್‌ಎಸ್ ಪ್ರಣಯ್ ಹಾಗೂ ಸಾಯಿ(ಪ್ರಣೀತ್)ಕೂಡ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಸತತ ಎರಡು ಪಂದ್ಯಗಳಲ್ಲಿ ಪ್ರಣಯ್ ಅವರು ಚೊಂಗ್ ವೀ ಹಗೂ ಚೆನ್ ಲಾಂಗ್‌ರನ್ನು ಮಣಿಸಿ ದೊಡ್ಡ ಸಾಧನೆ ಮಾಡಿದ್ದರು. ಈ ಸಾಧನೆ ಮಾಡಿರುವ ಪ್ರಣಯ್‌ಗೆ ಅಭಿನಂದನೆ ಸಲ್ಲಿಸುವೆ ಎಂದು ಶ್ರೀಕಾಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News