×
Ad

ಮರ್ರೆ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ನಂ.1

Update: 2017-06-28 23:54 IST

ಲಂಡನ್, ಜೂ.28: ಗ್ರೇಟ್ ಬ್ರಿಟನ್‌ನ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಜುಲೈ 3ರಿಂದ 16ರ ತನಕ ನಡೆಯಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ನೋವಾಕ್ ಜೊಕೊವಿಕ್ ನಂ.2, ರೋಜರ್ ಫೆಡರರ್ ನಂ.3, ರೆಫೇಲ್ ನಡಾಲ್ ನಂ.4 ಮತ್ತು ಸ್ಟಾನ್ ವಾವ್ರಿಂಕಾ ನಂ.5ನೆ ಸ್ಥಾನ ಪಡೆದಿದ್ದಾರೆ.

   ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅನುಪಸ್ಥಿತಿಯಲ್ಲಿ ಜರ್ಮನಿಯ ಆ್ಯಂಜೆಲಿಕೊ ಕೆರ್ಬೆರ್ ನಂ.1 ಶ್ರೇಯಾಂಕ ಪಡೆದಿದ್ದಾರೆ. ಅನಂತರದ ಐದು ಸ್ಥಾನಗಳನ್ನು ಕ್ರಮವಾಗಿ ಸಿಮೊನಾ ಹಾಲೆಪ್(ನಂ.2), ಕರೋಲಿನಾ ಪಿಲ್ಸ್‌ಕೊವಾ (ನಂ.3), ಎಲಿನಾ ಸ್ವಿಟೋಲಿನಾ(ನಂ.4), ಕರೋಲೀನಾ ವೊಝ್ನಿಯೊಕಿ(ನಂ.5) ಹಂಚಿಕೊಂಡಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News