ಗೋಭಕ್ತಿಯ ಹೆಸರಲ್ಲಿ ಕೊಲ್ಲುವುದನ್ನು ಒಪ್ಪಲಾಗದು : ಪ್ರಧಾನಿ ಮೋದಿ

Update: 2017-06-29 11:00 GMT

ಹೊಸದಿಲ್ಲಿ, ಜೂ.29: "ಗೋರಕ್ಷಣೆಯ ಹೆಸರಲ್ಲಿ ಜನರ ಹತ್ಯೆ ಸ್ವೀಕಾರಾರ್ಹವಲ್ಲ "ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

  ಅಹ್ಮದಾಬಾದ್ ನಲ್ಲಿ  ಗುರುವಾರ ಇತ್ತೀಚಿನ ದಿನಗಳಲ್ಲಿ ಗೋ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿ ನಡೆಯುತ್ತಿರುವ ಹತ್ಯೆ, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಕೊನೆಗೂ ಮೌನ ಮುರಿದಿರುವ ಪ್ರಧಾನಿ ಮೋದಿ “ ಈ ದೇಶದ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ.

ಗೋ ರಕ್ಷಣೆ ಮಾಡಲೇ ಬೇಕು. ಆದರೆ  ಗೋರಕ್ಷಣೆಯ ವಿಚಾರದಲ್ಲಿ ಮಹಾತ್ಮಾ ಗಾಂಧಿ ಮತ್ತು ಆಚಾರ್ಯ ವಿನೋಬಾ ಭಾವೆ

ಅವರಂತೆ ಈ ವರೆಗೂ ಯಾರೂ ಮಾತನಾಡಿರಲಿಲ್ಲ. ಗೋರಕ್ಷಣೆಗಾಗಿ   ತಮ್ಮ  ಇಚ್ಛೆಗೆ ವಿರುದ್ಧವಾಗಿ  ಇವತ್ತು ಜನರನ್ನು ಕೊಲ್ಲುವುದನ್ನು ಮಹಾತ್ಮ ಗಾಂಧಿ ಖಂಡಿತ ಒಪ್ಪಲಾರರು  ಎಂದು ಮೋದಿ ಅಭಿಪ್ರಾಯಪಟ್ಟರು.

ಹಿಂಸಾಚಾರದಿಂದ ಯಾವುದೇ ಸಮಸ್ಯೆಯನ್ನು  ಬಗೆ ಹರಿಸಲು ಸಾಧ್ಯವಿಲ್ಲ ಎಂದು ಮೋದಿ ಗೋರಕ್ಷಕರ ವಿರುದ್ಧ ಕಿಡಿ ಕಾರಿದರು.

ನಾವೆಲ್ಲರೂ ಮಹಾತ್ಮ ಗಾಂಧಿ ಅವರ ಕನಸಿನ ದೇಶವನ್ನು ಕಟ್ಟಲು  ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News