×
Ad

ಪ್ರೀ -ವಿಂಬಲ್ಡನ್ ಪಂದ್ಯದಿಂದ ದೂರ ಸರಿದ ಮರ್ರೆ

Update: 2017-06-29 23:43 IST

ಲಂಡನ್,ಜೂ.29: ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಅವರು ಇಂದು ಸೊಂಟ ನೋವಿನ ಕಾರಣದಿಂದಾಗಿ ಪ್ರಿ-ವಿಂಬಲ್ಡನ್ ಪ್ರದರ್ಶನ ಪಂದ್ಯದಿಂದ ದೂರ ಉಳಿದಿದ್ದಾರೆ.

ಸ್ಕಾಟ್ಲೆಂಡ್‌ನ 30ರ ಹರೆಯದ ಆಟಗಾರ ಮರ್ರೆ ವಿಂಬಲ್ಡನ್‌ನಲ್ಲಿ ಮೊದಲ ಬಾರಿ ಅಗ್ರಶ್ರೇಯಾಂಕದೊಂದಿಗೆ ಆಡಲಿದ್ದಾರೆ. ಅಸೌಖ್ಯದ ಕಾರಣದಿಂದಾಗಿ ಅವರು ಆಡಲು ಇಳಿಯಲಿಲ್ಲ. ಇಂದು ವಿಶ್ರಾಂತಿ ಪಡೆದಿರುವ ಮರ್ರೆ ಶುಕ್ರವಾರದ ಪಂದ್ಯಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News