×
Ad

ಫಿಫಾ ಅಂಡರ್-17 ವಿಶ್ವಕಪ್: ಭಾರತದ ಗ್ರೂಪ್ ಪಂದ್ಯಗಳು ಸ್ಥಳಾಂತರ

Update: 2017-07-01 23:31 IST

ಹೊಸದಿಲ್ಲಿ, ಜು.1: ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ತನ್ನ ಗ್ರೂಪ್ ಹಂತದ ಪಂದ್ಯವನ್ನು ನವಿ ಮುಂಬೈನ ಬದಲಿಗೆ ಹೊಸದಿಲ್ಲಿಯಲ್ಲಿ ಆಡಲಿದೆ.

 ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೊಸದಿಲ್ಲಿಯಲ್ಲಿ ನಡೆಯಬೇಕಾಗಿದ್ದ ಬಿ ಗುಂಪಿನ ಪಂದ್ಯಗಳು ನವಿ ಮುಂಬೈಗೆ ಸ್ಥಳಾಂತರವಾಗಿದೆ. ನಾಕೌಟ್ ಹಂತದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಕೋರಿಕೆಯ ಮೇರೆಗೆ ಫಿಫಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News