×
Ad

ಪಾಕಿಸ್ತಾನದ ಅಥ್ಲೀಟ್‌ಗಳಿಗೆ ವೀಸಾ ಮಂಜೂರು

Update: 2017-07-01 23:53 IST

ಹೊಸದಿಲ್ಲಿ, ಜು.1: ಆರು ಸದಸ್ಯರನ್ನು ಒಳಗೊಂಡ ಪಾಕಿಸ್ತಾನ ಅಥ್ಲೀಟ್ ತಂಡಕ್ಕೆ ಭಾರತ ಸರಕಾರ ವೀಸಾ ನೀಡಿದ್ದು, ಪಾಕ್ ಅಥ್ಲೀಟ್‌ಗಳು ಜು.6-9ರ ತನಕ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ಸರಕಾರದ ಈ ನಿರ್ಧಾರವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಸ್ವಾಗತಿಸಿದೆ.

ಪಾಕ್ ಅಥ್ಲೀಟ್‌ಗಳು ವೀಸಾಗಳನ್ನು ಪಡೆದಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಭುವನೇಶ್ವರಕ್ಕೆ ಆಗಮಿಸಲಿದ್ದಾರೆ.ನಮಗೆ ಪಾಕ್ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಇತ್ತು. ಈ ಕಾರಣದಿಂದ ಸರಕಾರದ ಈ ನಿರ್ಧಾರ ಖುಷಿಕೊಟ್ಟಿದೆ ಎಂದು ಎಎಫ್‌ಐ ಕಾರ್ಯದರ್ಶಿ ಸಿ.ಕೆ. ವಲ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News