×
Ad

ರಶ್ಯಕ್ಕೆ ತೆರಳಲಿರುವ ಫಿಫಾ ಮಾಜಿ ಅಧ್ಯಕ್ಷ ಬ್ಲಾಟರ್

Update: 2017-07-02 22:06 IST

ಝೂರಿಕ್,ಜು.2: ಕಳಂಕಿತ ಫಿಫಾದ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ 2018ರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವಹಿಸಲಿರುವ ರಶ್ಯಕ್ಕೆ ಭೇಟಿ ನೀಡಲಿದ್ದಾರೆ.

ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ಫಿಫಾ ಎಥಿಕ್ಸ್ ಕಮಿಟಿ ಬ್ಲಾಟರ್‌ಗೆ ಆರು ವರ್ಷಗಳ ಕಾಲ ಫುಟ್ಬಾಲ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಷೇಧ ಹೇರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳದಂತೆ ಬ್ಲಾಟರ್ ವಕೀಲರು ಸಲಹೆ ನೀಡಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್‌ಗೆ ರಶ್ಯಕ್ಕೆ ತೆರಳುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ಲಾಟರ್, ಹೌದು, ಖಂಡಿತವಾಗಿಯೂ ನಾನು ರಶ್ಯಕ್ಕೆ ತೆರಳುವೆ. ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನಗೆ ವಿಶ್ವಕಪ್‌ಗೆ ಆಹ್ವಾನ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News