ಏಷ್ಯನ್ ಯೂತ್ ಚಾಂಪಿಯನ್‌ಶಿಪ್
ಬ್ಯಾಂಕಾಕ್, ಜು.2: ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನ ಎರಡನೆ ದಿನ ಭಾರತೀಯ ಬಾಕ್ಸರ್‌ಗಳು ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಸಂದೀಪ್ ಕುಮಾರ್(52ಕೆಜಿ),ಅಂಕಿತ್ ಕುಮಾರ್(60ಕೆಜಿ), ನವೀನ್ ಬೂರಾ(69ಕೆಜಿ) ಹಾಗೂ ಮುಹಮ್ಮದ್ ಖಾನ್(56ಕೆಜಿ) ಅಂತಿಮ-8 ಹಂತ ತಲುಪಿದ್ದಾರೆ.
ಮೊದಲಿಗೆ ಬಾಕ್ಸಿಂಗ್ ಕಣಕ್ಕೆ ಇಳಿದಿದ್ದ ಸಂದೀಪ್ ಇರಾಕ್‌ನ ಇಸ್ಕಂದರ್ ಹಶಮ್(56ಕೆಜಿ) ಎದುರಿಸಿದ್ದು, ನಿರೀಕ್ಷೆಯಂತೆಯೇ ಸಂದೀಪ್ ಜಯ ಸಾಧಿಸಿದರು. ಸಂದೀಪ್ ಮುಂದಿನ ಸುತ್ತಿನಲ್ಲಿ ಜಪಾನ್‌ನ ನಕಗಕಿ ರಿಯುಟರೊ ಅವರನ್ನು ಎದುರಿಸಲಿದ್ದಾರೆ.
60 ಕೆಜಿ ತೂಕ ವಿಭಾಗದಲ್ಲಿ ಅಂಕಿತ್‌ಕುಮಾರ್ ಇಂಡೋನೇಷ್ಯದ ಮಿಧುನ್ ರೆಝಾ ವಿರುದ್ಧ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
69 ಕೆಜಿ ತೂಕ ವಿಭಾಗದಲ್ಲಿ ನವೀನ್ ಕಿರ್ಜಿಸ್ತಾನದ ಯೈರ್ಕುಲೊವ್ ಇರ್ಝಾನ್‌ರನ್ನು ಸೋಲಿಸಿದ್ದು, ಮುಂದಿನ ಸುತ್ತಿನಲ್ಲಿ ಚೀನಾದ ಹ್ವಾಂಗ್ ರೂ ಅವರನ್ನು ಎದುರಿಸಲಿದ್ದಾರೆ.
ವಿಶ್ವ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ಅನುಭವಿ ಬಾಕ್ಸರ್ ಮುಹಮ್ಮದ್ ಖಾನ್ 56 ಕೆಜಿ ತೂಕ ವಿಭಾಗದಲ್ಲಿ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಂಗೋಲಿಯದ ತಸಾಗಾನ್‌ಬಾತಾರ್ ಮುಂಖ್‌ಬಾತಾರ್‌ರನ್ನು ಮಣಿಸಿ ಅಂತಿಮ 8ರ ಸುತ್ತಿಗೆ ಪ್ರವೇಶಿಸಿದರು.
ಪ್ರಸ್ತುತ ಟೂರ್ನಿಯಲ್ಲಿ 23 ದೇಶಗಳ 120 ಬಾಕ್ಸರ್‌ಗಳು ಭಾಗವಹಿಸುತ್ತಿದ್ದು, ಭಾರತ ಕಳೆದ ಆವೃತ್ತಿಯ ಟೂರ್ನಿಯಲ್ಲಿ 3 ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಜಯಿಸಿತ್ತು.