ನಾಲ್ಕನೆ ಏಕದಿನ: ವೆಸ್ಟ್‌ಇಂಡಿಸ್ 189/9

Update: 2017-07-02 18:27 GMT

ಆ್ಯಂಟಿಗುವಾ, ಜು.2: ವೆಸ್ಟ್‌ಇಂಡಿಸ್ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ವಿರುದ್ಧ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 189 ರನ್ ಗಳಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್‌ಇಂಡೀಸ್ ತಂಡದ ಆರಂಭ ಚೆನ್ನಾಗಿತ್ತು. ಅಗ್ರ ಸರದಿಯ ಐವರು ಆಟಗಾರರು 20ಕ್ಕಿಂತ ಹೆಚ್ಚು ರನ್ ದಾಖಲಿಸಿದರು.
ಭಾರತದ ಉಮೇಶ್ ಯಾದವ್(36ಕ್ಕೆ3) , ಹಾರ್ದಿಕ್ ಪಾಂಡ್ಯ(40ಕ್ಕೆ 3), ಕುಲದೀಪ್ ಯಾದವ್(31ಕ್ಕೆ2) ಮತ್ತೆ ಮಿಂಚಿದರು. ವೆಸ್ಟ್‌ಇಂಡೀಸ್‌ನ ಸ್ಕೋರ್ 200ಕ್ಕೆ ತಲುಪಲು ಅವಕಾಶ ನೀಡಲಿಲ್ಲ.
ದಿನೇಶ್ ಕಾರ್ತಿಕ್, ಮುಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ಅವರಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ನೀಡಲಾಗಿತ್ತು. ಶಮಿ 10 ಓವರ್‌ಗಳಲ್ಲಿ 33 ರನ್ ನೀಡಿದರೂ ವಿಕೆಟ್ ಪಡೆಯದೆ ಕೈಸುಟ್ಟುಕೊಂಡರು.
   ವಿಂಡೀಸ್‌ನ ಆರಂಭಿಕ ದಾಂಡಿಗರಾದ ಎವಿನ್ ಲೆವಿಸ್ ಮತ್ತು ಕೈಲ್ ಹೋಪ್ ಮೊದಲ ವಿಕೆಟ್‌ಗೆ 57 ರನ್ ಸೇರಿಸಿದರು. ಇದು ಸರಣಿಯಲ್ಲಿ ಮೊದಲ ಬಾರಿ ಅರ್ಧಶತಕ ದಾಖಲೆಯಾಗಿದೆ. ಶಾಹಿ ಹೋಪ್ ಮತ್ತು ರೋಸ್ಟನ್ ಮೂರನೆ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು.
 ಲೆವಿಸ್ (35), ಕೈಲ್ ಹೋಪ್(35), ಶಾಹಿ ಹೋಪ್ (25), ಚೇಸ್ (24), ಜೇಸನ್ ಮುಹಮ್ಮದ್(20), ಹೋಲ್ಡರ್ (11), ಬಿಶೂ (15) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News