×
Ad

ವಿಂಬಲ್ಡನ್ ಟೂರ್ನಿ: ಕಿರ್ಗಿಯೊಸ್ ಗಾಯಾಳು, ನಿವೃತ್ತಿ

Update: 2017-07-03 23:36 IST

ಲಂಡನ್,ಜು.3: ಗಾಯದ ಸಮಸ್ಯೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಆಟಗಾರ ನಿಕ್ ಕಿರ್ಗಿಯೊಸ್ ವಿಂಬಲ್ಡನ್‌ನ ಮೊದಲ ಸುತ್ತಿನ ಪಂದ್ಯದಿಂದ ನಿವೃತ್ತಿಯಾಗಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಕಿರ್ಗಿಯೊಸ್ ಪೀರ್-ಹ್ಯೂಸ್ ಹೆರ್ಬರ್ಟ್‌ರನ್ನು ಎದುರಿಸಿದ್ದರು. ಹೆರ್ಬರ್ಟ್ ವಿರುದ್ಧ ಮೊದಲೆರಡು ಸೆಟ್‌ಗಳನ್ನು 6-3, 6-4 ರಿಂದ ಸೋತ ಬಳಿಕ ಕಿರ್ಗಿಸ್‌ಗೆ ಗಾಯದ ಸಮಸ್ಯೆ ಹೆಚ್ಚಾಗಿ ಪಂದ್ಯದಿಂದ ನಿವೃತ್ತಿಯಾದರು.
ಗಾಯದ ಸಮಸ್ಯೆಯಿಂದಾಗಿಯೇ ಕ್ವೀನ್ಸ್ ಕ್ಲಬ್ ಟೂರ್ನಿಯಿಂದ ಹೊರಗುಳಿದಿದ್ದ ಕಿರ್ಗಿಯೊಸ್ ವಿಂಬಲ್ಡನ್‌ಗೆ 60-65ಶೇ. ಫಿಟ್ ಇರುವುದಾಗಿ ಕಳೆದ ವಾರ ಹೇಳಿದ್ದರು. 22ರ ಹರೆಯದ ಕಿರ್ಗಿಯೊಸ್ ಈತನಕ ಮೂರು ಬಾರಿ ವಿಂಬಲ್ಡನ್ ಟೂರ್ನಿಯನ್ನು ಆಡಿದ್ದು, ಪ್ರತಿ ಬಾರಿಯೂ ನಾಲ್ಕನೆ ಸುತ್ತಿಗೆ ತಲುಪಿದ್ದಾರೆ.

 ಈ ವರ್ಷದ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ನಲ್ಲಿ ಎರಡನೆ ಸುತ್ತಿನಲ್ಲಿ ಎಡವಿದ್ದ ಕಿರ್ಗಿಯೊಸ್ ಗಾಯಾಳು ನಿವೃತ್ತಿಯಾಗುವ ಮೊದಲು ವಿಂಬಲ್ಡನ್ ಟೂರ್ನಿಯ ಮೊದಲ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದರು.
ಎರಡನೆ ಸುತ್ತಿಗೆ ತಲುಪಿರುವ ಹೆರ್ಬರ್ಟ್ ಫ್ರಾನ್ಸ್‌ನ ಬೆನೊಟ್ ಪೈರ್ ಅಥವಾ ಬ್ರೆಝಿಲ್‌ನ ರೊಜೆರಿಯೊ ಡುಟ್ರಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News