ಫಿಫಾ ಅಂಡರ್-17 ವಿಶ್ವಕಪ್ ತಯಾರಿ ಪರಿಶೀಲಿಸಿದ ಅಸ್ಸಾಂ ಮುಖ್ಯಮಂತ್ರಿ ಸೊನೊವಾಲ್
Update: 2017-07-03 23:51 IST
ಗುವಾಹಟಿ, ಜು.3: ಅಕ್ಟೋಬರ್‌ನಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನ ವೇಳೆ 9 ಪಂದ್ಯಗಳು ಗುವಾಹಟಿಯಲ್ಲಿ ನಡೆಯಲಿದ್ದು, ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ವಿಶ್ವಕಪ್‌ನ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿದರು.
ಸಮಿತಿಯ ಮೊದಲ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸೊನೊವಾಲ್ ಪಂದ್ಯಗಳ ಆಯೋಜನೆಯಲ್ಲಿ ವಿವಿಧ ವಿಭಾಗದ ಪಾತ್ರದ ಬಗ್ಗೆ ಚರ್ಚಿಸಿದರು.
ಫಿಫಾ ಅಧಿಕಾರಿಗಳು, ಸ್ಟೇಡಿಯಂನ ನಿರ್ದೇಶಕ ರೊಮ್ಮಾ ಖನ್ನಾ ಅವರು ಸ್ಟೇಡಿಯಂನ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.ಅಕ್ಟೋಬರ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಗುವಾಹಟಿಯು ತಲಾ ಒಂದು ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಸಹಿತ ಒಟ್ಟು 9 ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿದೆ.
ಮತ್ತೊಂದು ಸಭೆಯಲ್ಲಿ ನ.19ರಿಂದ 26ರ ತನಕ ಗುವಾಹಟಿಯಲ್ಲಿ ನಡೆಯಲಿರುವ ಎಐಬಿಎ ಮಹಿಳೆಯರ ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.