ಬೇಗನೆ ಹೊರ ನಡೆದ ಬೌಚರ್ಡ್
Update: 2017-07-04 23:15 IST
ಲಂಡನ್,ಜು.4: ಸ್ಪೇನ್‌ನ ಕಾರ್ಲಾ ಸುಯರೆಝ್ ನವಾರೊಗೆ ಶರಣಾದ ಕೆನಡಾದ ಆಟಗಾರ್ತಿ ಎವ್‌ಜಿನಿ ಬೌಚರ್ಡ್ ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.
2014ರಲ್ಲಿ ವಿಂಬಲ್ಡನ್ ಟೂರ್ನಿಯ ರನ್ನರ್ ಅಪ್ ಬೌಚರ್ಡ್ ಕಳೆದ 3 ವರ್ಷಗಳಲ್ಲಿ ಎರಡನೆ ಬಾರಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ.
ಬೌಚರ್ಡ್ ಮೊದಲ ಸೆಟ್‌ನ್ನು 6-1 ರಿಂದ ಗೆದ್ದುಕೊಂಡು ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಮುಂದಿನ ಎರಡು ಸೆಟ್‌ಗಳನ್ನು 1-6, 1-6 ಅಂತರದಿಂದ ಸೋತು ನಿರಾಸೆಗೊಳಿಸಿದರು.
2014ರ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಬೌಚರ್ಡ್ ಪೆಟ್ರಾ ಕ್ವಿಟೋವಾ ವಿರುದ್ಧ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದರು. ಬೌಚರ್ಡ್‌ರನ್ನು ಟೂರ್ನಿಯಿಂದ ಬೇಗನೆ ಹೊರಗಟ್ಟಿರುವ ಸುಯರೆಝ್ ಮುಂದಿನ ಸುತ್ತಿನಲ್ಲಿ ಚೀನಾದ ಪೆಂಗ್ ಶುಐ ಅವರನ್ನು ಎದುರಿಸಲಿದ್ದಾರೆ.