ಓಟಗಾರ್ತಿ ದ್ಯುತಿ ಚಂದ್ ಲಿಂಗ ಪ್ರಕರಣಕ್ಕೆ ಮರು ಜೀವ

Update: 2017-07-04 18:10 GMT

ಭುವನೇಶ್ವರ, ಜು.4: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆರಂಭವಾಗಲು ಒಂದು ದಿನ ಬಾಕಿ ಇರುವಾಗ ಭಾರತದ ಓಟಗಾರ್ತಿ ದುತಿ ಚಂದ್‌ರ ಲಿಂಗ ಪ್ರಕರಣ ಮತ್ತೆ ಸುದ್ದಿಯಾಗಿದೆ. ಹೈಪರ್‌ಆ್ಯಂಡ್ರೊಜೆನಿಸಂ ನೀತಿಗೆ ಬೆಂಬಲವಾಗಿ ಇನ್ನಷ್ಟು ಪುರಾವೆ ಕಲೆಹಾಕಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ ಸಂಸ್ಥೆ(ಐಎಎಎಫ್) ಮತ್ತೊಮ್ಮೆ ಕ್ರೀಡಾ ಪಂಚಾಯತಿ ನ್ಯಾಯಾಲಯಕ್ಕೆ(ಸಿಎಎಸ್)ತೆರಳಲು ನಿರ್ಧರಿಸಿದೆ.

ಚಂದ್, ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ(ಎಎಫ್‌ಐ) ಹಾಗೂ ಐಎಎಎಫ್ ನಡುವಿನ ಪ್ರಕರಣವನ್ನು 2015ರ ಜು.27 ರಂದು ಕೈಗೆತ್ತಿಕೊಂಡಿದ್ದ ಸಿಎಎಸ್ ಜಾಗತಿಕ ಅಥ್ಲೆಟಿಕ್ಸ್ ಸಂಸ್ಥೆಯ ಹೈಪರ್‌ಆ್ಯಂಡ್ರೊಜೆನಿಸಂ ನೀತಿಯನ್ನು ಎರಡು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿತ್ತು.

ಸಿಎಎಸ್ 2 ವರ್ಷಗಳ ತನ್ನ ಹಿಂದಿನ ತೀರ್ಪಿನಲ್ಲಿ ಚಂದ್‌ರ ಮೇಲ್ಮನವಿಯಲ್ಲಿ ಭಾಗಶಃ ಎತ್ತಿ ಹಿಡಿದಿತ್ತು. ಐಎಎಎಫ್‌ನ ಹೈಪರ್‌ಆ್ಯಂಡ್ರೊಜೆನಿಸಂ ನೀತಿಗೆ ಸಂಬಂಧಿಸಿ ಅಂತಿಮ ತೀರ್ಪು ನೀಡುವ ತನಕ ಅಥ್ಲೆಟಿಕ್ ಕೂಟಗಳಲ್ಲಿ ಭಾಗವಹಿಸಲು ಚಂದ್‌ಗೆ ಸಿಎಎಸ್ ಅವಕಾಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News