ಪಾಕ್ ಟೆಸ್ಟ್ ತಂಡಕ್ಕೆ ಸರ್ಫರಾಝ್ ನಾಯಕ

Update: 2017-07-04 18:20 GMT

ಲಾಹೋರ್, ಜು.4: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸರ್ಫರಾಝ್ ಅಹ್ಮದ್‌ರನ್ನು ಪಾಕಿಸ್ತಾನ ಟೆಸ್ಟ್ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.
ಪಾಕ್‌ನ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನಾಗಿರುವ ಸರ್ಫರಾಝ್‌ಗೆ ಮಿಸ್ಬಾವುಲ್ ಹಕ್‌ರಿಂದ ತೆರವಾಗಿರುವ ಟೆಸ್ಟ್ ನಾಯಕನ ಸ್ಥಾನವನ್ನು ತುಂಬುವಂತೆ ಕೋರಲಾಗಿದೆ.

ಸರ್ಫರಾಝ್ ನೇತೃತ್ವದಲ್ಲಿ 2006ರಲ್ಲಿ ಪಾಕ್‌ನ ಅಂಡರ್-19 ತಂಡ ವಿಶ್ವಕಪ್‌ನ್ನು ಜಯಿಸಿತ್ತು.ಇತ್ತೀಚೆಗೆ ಸರ್ಫರಾಝ್ ನಾಯಕತ್ವದಲ್ಲೇ ಪಾಕ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿತ್ತು. 1992ರ ವಿಶ್ವಕಪ್‌ನ ಬಳಿಕ ಪಾಕ್ 50 ಓವರ್ ಟೂರ್ನಿಯಲ್ಲಿ ಗೆದ್ದಂತಹ ಮೊದಲ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ.
ಸರ್ಫರಾಝ್ ಪಾಕ್‌ನ 32ನೆ ಟೆಸ್ಟ್ ನಾಯಕನಾಗಲಿದ್ದು, ಈ ವರ್ಷಾಂತ್ಯದಲ್ಲಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News