×
Ad

ಮಹಿಳಾ ವಿಶ್ವಕಪ್: ಭಾರತಕ್ಕೆ ನಾಲ್ಕನೆ ಗೆಲುವು

Update: 2017-07-05 22:30 IST

ಡರ್ಬಿ, ಜು.5: ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಬುಧವಾರ ಶ್ರೀಲಂಕಾ ವಿರುದ್ಧ 16 ರನ್‌ಗಳ ಜಯ ಗಳಿಸಿದೆ.
ಇದರೊಂದಿಗೆ ಭಾರತ ಸತತ 4ನೆ ಗೆಲುವು ದಾಖಲಿಸಿದೆ.

ಗೆಲುವಿಗೆ 233 ರನ್ ಮಾಡಬೇಕಿದ್ದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿತು. ಲಂಕಾದ ವಿಕೆಟ್ ಕೀಪರ್ ಸುರಂಗಿಕ (61) ಗರಿಷ್ಠ ಸ್ಕೋರ್ ದಾಖಲಿಸಿದರು.

ಇದಕ್ಕೂ ಮೊದಲು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 232 ರನ್ ಗಳಿಸಿತ್ತು.
 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ದೀಪ್ತಿ ಶರ್ಮ (78)ಮತ್ತು ಮಿಥಾಲಿ ರಾಜ್ (53) ಅರ್ಧಶತಕಗಳ ಸಹಾಯದಿಂದ ಸ್ಪರ್ಧಾತ್ಮಕ ಸವಾಲನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News