×
Ad

ಎಂಸಿಎ ಫೀಲ್ಡಿಂಗ್ ಸಲಹೆಗಾರರಾಗಿ ಜಾಂಟಿ ರೋಡ್ಸ್?

Update: 2017-07-05 23:09 IST

ಮುಂಬೈ, ಜು.5: ಮುಂಬೈ ಹಾಗೂ ಭಾರತದೊಂದಿಗೆ ಜಾಂಟಿ ರೋಡ್ಸ್‌ರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ಲಕ್ಷಣ ಗೋಚರಿಸುತ್ತಿದ್ದು, ದಕ್ಷಿಣ ಆಫ್ರಿಕದ ಮಾಜಿ ಶ್ರೇಷ್ಠ ಫೀಲ್ಡರ್ ಆಗಿರುವ ರೋಡ್ಸ್‌ರನ್ನು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಫೀಲ್ಡಿಂಗ್ ಸಲಹೆಗಾರರನ್ನಾಗಿ ಆಯ್ಕೆ ಮಾಡಲು ಗಂಭೀರ ಚಿಂತನೆ ನಡೆಸುತ್ತಿದೆ.

ರೋಡ್ಸ್ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾವು ರೋಡ್ಸ್‌ರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರು ನಮ್ಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ. ಅವರ ನೇಮಕ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಎಂಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2010ರಲ್ಲಿ ರೋಡ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರ್ಪಡೆಯಾದ ಬಳಿಕ ಅವರಿಗೆ ಭಾರತ ಎರಡನೆ ಮನೆಯಾಗಿ ಪರಿಣಮಿಸಿತ್ತು. ಭಾರತದಲ್ಲಿ ಅವರ ಇಬ್ಬರು ಮಕ್ಕಳು ಜನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News