ವಿಂಬಲ್ಡನ್: ವೋಝ್ನಿಯಾಕಿ ದ್ವಿತೀಯ ಸುತ್ತಿಗೆ ಲಗ್ಗೆ

Update: 2017-07-05 18:01 GMT

ಲಂಡನ್, ಜು.5: ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ ವಿಂಬಲ್ಡನ್ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವೋಝ್ನಿಯಾಕಿ ಹಂಗೇರಿಯದ ಟಿಮಿಯಾ ಬಾಬೊಸ್‌ರನ್ನು 6-4, 4-6, 6-1 ಸೆಟ್‌ಗಳಿಂದ ಮಣಿಸಿದರು. ಐದನೆ ಶ್ರೇಯಾಂಕದ ಆಟಗಾರ್ತಿ ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ ಬಲ್ಗೇರಿಯದ ಸ್ವೆಟಾನಾ ಪಿರೊಂಕೊವಾ ಅಥವಾ ಇಟಲಿಯ ಸಾರಾ ಇರ್ರಾನಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News