ಧೋನಿಗೆ ಎ ಶ್ರೇಣಿ ಗುತ್ತಿಗೆ: ರಮೀಝ್ ಟೀಕೆ

Update: 2017-07-05 18:09 GMT

ಕರಾಚಿ, ಜು.5: ಎಂಎಸ್ ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಹೊರತಾಗಿಯೂ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ ಶ್ರೇಣಿ ನೀಡಿರುವುದನ್ನು ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ, ವೀಕ್ಷಕವಿವರಣೆಗಾರ ರಮೀಝ್ ರಾಜಾ ಪ್ರಶ್ನಿಸಿದ್ದಾರೆ.

 ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೆಸ್ಟ್ ಕ್ರಿಕೆಟ್‌ನ್ನು ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಉಪಖಂಡದಲ್ಲಿ ಟೆಸ್ಟ್ ಕ್ರಿಕೆಟ್ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಟೆಸ್ಟ್ ಕ್ರಿಕೆಟ್ ಸ್ಥಾನಮಾನಕ್ಕೆ ನಾವು ಗೌರವ ನೀಡಲೇಬೇಕು. ಧೋನಿ ಟೆಸ್ಟ್‌ನಿಂದ ನಿವೃತ್ತಿಯಾದರೂ ಈಗಲೂ ಎ ದರ್ಜೆಯ ಗುತ್ತಿಗೆ ಪಡೆಯುತ್ತಿದ್ದಾರೆ. ಪಾಕ್‌ನಲ್ಲಿ ಶಾಹಿದ್ ಅಫ್ರಿದಿ ಟೆಸ್ಟ್‌ನಿಂದ ನಿವೃತ್ತಿಯಾದ ಬಳಿಕವೂ ಅವರಿಗೆ ಪಿಸಿಬಿ ಎ ಶ್ರೇಣಿ ನೀಡಿತ್ತು. ಇದು ಏಷ್ಯಾದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ರಾಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News