×
Ad

ನಿವೃತ್ತಿಯಿಂದ ಹಿಂಪಡೆದ ಗ್ಯಾರಿ ಕಾಸ್ಪರೊವ್

Update: 2017-07-06 23:46 IST

ನ್ಯೂಯಾರ್ಕ್, ಜು.6: ಮಾಜಿ ಚೆಸ್ ವಿಶ್ವ ಚಾಂಪಿಯನ್ ಗ್ಯಾರಿ ಕಾಸ್ಪರೊವ್ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದು, ಮುಂದಿನ ತಿಂಗಳು ಆರಂಭವಾಗಲಿರುವ ಯುಎಸ್ ಚೆಸ್ ಟೂರ್ನಮೆಂಟ್‌ನಲ್ಲಿ ಆಡಲಿದ್ದಾರೆ ಎಂದು ಆಯೋಜಕರು ಇಂದು ತಿಳಿಸಿದ್ದಾರೆ.

ಹಠಾತ್ ನಿವೃತ್ತಿ ಘೋಷಿಸುವರೆಗೂ ಮಿಶ್ರ ಚೆಸ್ ನಲ್ಲಿ ಪ್ರಾಬಲ್ಯ ಸಾಧಿಸಿದ್ದ... ಕಾಸ್ಪರೊವ್ ಮಿಸ್ಸೌರಿಯ ಸೈಂಟ್ ಲೂಯಿಸ್‌ನಲ್ಲಿ ನಡೆಯಲಿರುವ ಸಿಂಕ್‌ಫೀಲ್ಡ್ ಕಪ್‌ನಲ್ಲಿ ಅಗ್ರ 9 ಆಟಗಾರರೊಂದಿಗೆ ಸೆಣಸಾಡಲಿದ್ದಾರೆ.

ಮಾಜಿ ಚಾಂಪಿಯನ್ ಕಾಸ್ಪರೊವ್ 2005ರಲ್ಲಿ ವೃತ್ತಿಪರ ಚೆಸ್‌ನಿಂದ ನಿವೃತ್ತಿಯಾಗಿದ್ದರು. ಅವರಿಗೆ ರ್ಯಾಪಿಡ್ ಹಾಗೂ ಬ್ಲಿಟ್ಜ್ ಸ್ಪರ್ಧೆಗಳಿಗೆ ವೈಲ್ಡ್‌ಕಾರ್ಡ್ ನೀಡಲಾಗಿದೆ.

ಹಾಲಿ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್, ವಿಶ್ವದ ನಂ.2ನೆ ಆಟಗಾರ ಜಪಾನ್‌ನ ಹಿಕಾರು ನಕಮುರಾ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

54ರ ಪ್ರಾಯದ ಕಾಸ್ಪರೊವ್ ಇನ್ನೋರ್ವ ಚೆಸ್ ದಂತಕತೆ ಭಾರತದ ವಿಶ್ವನಾಥನ್ ಆನಂದ್(47 ವರ್ಷ) ಬಳಿಕ ಚೆಸ್‌ನಲ್ಲಿ ಸಕ್ರಿಯವಾಗಿರುವ ವಿಶ್ವದ ಎರಡನೆ ಹಿರಿಯ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News