×
Ad

ಏಕೈಕ ಟ್ವೆಂಟಿ-20: ವಿಂಡೀಸ್ ವಿರುದ್ಧ ಭಾರತ 190/6

Update: 2017-07-09 22:58 IST

ಜಮೈಕಾ, ಜು.9: ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಮೂರನೆ ವಿಕೆಟ್‌ಗೆ ಸೇರಿಸಿದ ನಿರ್ಣಾಯಕ ಜೊತೆಯಾಟದ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಏಕೈಕ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ 190 ರನ್ ಕಲೆ ಹಾಕಿದೆ.

ಇಲ್ಲಿನ ಸಬೀನಾ ಪಾರ್ಕ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ವಿಂಡೀಸ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಶಿಖರ್ ಧವನ್‌ರೊಂದಿಗೆ(23) ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ(39) ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಕೊಹ್ಲಿ ಹಾಗೂ ಧವನ್ ಬೆನ್ನುಬೆನ್ನಿಗೆ ಔಟಾದಾಗ 3ನೆ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿದ ದಿನೇಶ್ ಕಾರ್ತಿಕ್(48, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಪಂತ್(38, 35 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಕೆಸ್ರಿಕ್‌ವಿಲಿಯಮ್ಸ್ ಎಸೆದ ಅಂತಿಮ ಓವರ್‌ನಲ್ಲಿ 18 ರನ್ ಕಲೆ ಹಾಕಿದ ರವೀಂದ್ರ ಜಡೇಜ ಹಾಗೂ ಆರ್. ಅಶ್ವಿನ್ ವಿಂಡೀಸ್‌ಗೆ 191 ರನ್ ಗುರಿ ನೀಡಿದರು. ವಿಂಡೀಸ್‌ನ ಪರ ಟೇಲರ್(2-31) ಹಾಗೂ ವಿಲಿಯಮ್ಸ್(2-38) ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News