×
Ad

ಕೊಂಟಾ, ಒಸ್ಟಾಪೆಂಕೊ ಅಂತಿಮ- 8ರ ಸುತ್ತಿಗೆ ಲಗ್ಗೆ

Update: 2017-07-10 23:51 IST

ಫ್ರಾನ್ಸ್‌ನ ಕರೊಲಿನಾ ಗಾರ್ಸಿಯಾರನ್ನು 7-6(3), 4-6, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ ಜೊಹಾನ್ನಾ ಕೊಂಟಾ 33 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ ಮೊದಲ ಬ್ರಿಟನ್ ಆಟಗಾರ್ತಿ ಎನಿಸಿಕೊಂಡರು. 1984ರಲ್ಲಿ ಜೋ ಡುರೀ ಅಂತಿಮ-8ರ ಹಂತವನ್ನು ತಲುಪಿದ್ದರು.

ಈವರೆಗೆ ಐದು ಬಾರಿ ವಿಂಬಲ್ಡನ್ ಟೂರ್ನಿ ಆಡಿರುವ ಕೊಂಟಾ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. 40 ವರ್ಷಗಳ ಬಳಿಕ ಬ್ರಿಟನ್‌ನ ಸಿಂಗಲ್ಸ್ ಚಾಂಪಿಯನ್ ಆಗುವ ಗುರಿ ಹಾಕಿಕೊಂಡಿದ್ದಾರೆ.
20ರ ಹರೆಯದ ಲಾಟ್ವಿಯ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ರಶ್ಯದ ಎಲಿನಾ ಸ್ವಿಟೊಲಿನಾರನ್ನು 6-3, 7-6(6) ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News