×
Ad

ಮಹಿಳೆಯರ ಎಚ್‌ಡಬ್ಲುಎಲ್ ಸೆಮಿ ಫೈನಲ್: ಅಮೆರಿಕಕ್ಕೆ ಶರಣಾದ ಭಾರತ

Update: 2017-07-11 23:58 IST

ಜೋಹಾನ್ಸ್‌ಬರ್ಗ್, ಜು.11: ಮಹಿಳೆಯರ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್‌ನ ಬಿ ಗುಂಪಿನ ತನ್ನ ಎರಡನೆ ಪಂದ್ಯದಲ್ಲಿ ಭಾರತ ತಂಡ ಅಮೆರಿಕದ ವಿರುದ್ಧ 1-4 ಗೋಲು ಅಂತರದಿಂದ ಸೋಲುಂಡಿದೆ.

ಜಿಲ್ ವಿಟ್ಮೆರ್ 24ನೆ ನಿಮಿಷದಲ್ಲಿ ಭಾರತದ ಗೋಲ್‌ಕೀಪರ್ ಸವಿತಾರನ್ನು ವಂಚಿಸಿ ಅಮೆರಿಕದ ಗೋಲು ಖಾತೆ ತೆರೆದರು. 38ನೆ ನಿಮಿಷದಲ್ಲಿ ಗೋಲು ಬಾರಿಸಿದ ಲಿಲಿಮಾ ಮಿಂಝ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಭಾರತ ಮೊದಲ ಗೋಲು ಬಾರಿಸಿ ಎರಡು ನಿಮಿಷದ ಬಳಿಕ ಟೇಲರ್ ವೆಸ್ಟ್(40ನೆ ನಿಮಿಷ) ಅಮೆರಿಕದ ಪರ ಎರಡನೆ ಗೋಲು ಬಾರಿಸಿದರು.

43ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಜಿಲ್ ವೆಟ್ಮೆರ್ ಅಮೆರಿಕದ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು. ಅಂತಿಮ ಕ್ವಾರ್ಟರ್‌ನಲ್ಲಿ ಅಮೆರಿಕ ತಂಡ ಭಾರತದ ಮೇಲೆ ತೀವ್ರ ಒತ್ತಡ ಹಾಕಿ ಗೋಲು ಬಾರಿಸದಂತೆ ನೋಡಿಕೊಂಡಿತು. 49ನೆ ನಿಮಿಷದಲ್ಲಿ ಗೋಲು ಬಾರಿಸಿದ ಮೈಕಲ್ ವಿಟೆಸ್ ಅಮೆರಿಕ 4-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News