ಪುರುಷರ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಕುಬೊಟ್ - ಮೆಲೊ

Update: 2017-07-16 18:19 GMT

ಲಂಡನ್, ಜು.16: ಪೊಲೆಂಡ್‌ನ ಲೂಕಝ್ ಕುಬೊಟ್ ಮತ್ತು ಬ್ರೆಝಿಲ್‌ನ ಮಾರ್ಸಿಲೊ ಮೆಲೊ ವಿಂಬಲ್ಡನ್ ಪುರುಷರ ವಿಭಾಗದ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕುಬೊಟ್ ಮತ್ತು ಮೆಲೊ ಅವರು ಒಲಿವರ್ ಮಾರಾಕ್ ಮತ್ತು ಮ್ಯಾಟೆ ಪಾವಿಕ್ ವಿರುದ್ಧ 5-7,7-5, 7-6(2), 3-6, 13-11 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಪಡೆದರು. ಕುಬೊಟ್ - ಮೆಲೊ ಅವರು ಅಸ್ಟ್ರೀಯದ ಒಲಿವರ್-ಮತ್ತು ಕ್ರೋವೇಶಿಯಾದ ಪಾವಿಕ್‌ನಡುವಿನ ಹಣಾಹಣಿ 4 ಗಂಟೆ ಮತ್ತು 39 ನಿಮಿಷಗಳ ಕಾಲ ನಡೆಯಿತು. ಇದರಲ್ಲಿ ಕೊನೆಗೂ ಕುಬೊಟ್ - ಮೆಲೊ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News