ಬೆಂಗಳೂರು ಬುಲ್ಸ್ ತಂಡಕ್ಕೆ ರೋಹಿತ್ ಕುಮಾರ್ ನಾಯಕ

Update: 2017-07-16 18:23 GMT

ಬೆಂಗಳೂರು, ಜು.16: ಸ್ಟಾರ್ ರೈಡರ್ ರೋಹಿತ್ ಕುಮಾರ್ ಮತ್ತು ಡಿಫೆಂಡರ್ ರವೀಂದರ್ ಪಾಹಲ್ ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಬೆಂಗಳೂರು ಬುಲ್ಸ್ ತಂಡಕ್ಕೆ ಕ್ರಮವಾಗಿ ನಾಯಕ ಹಾಗೂ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಜುಲೈ 28ರಂದು ಆರಂಭವಾಗಲಿರುವ ಕಬಡ್ಡಿ ಲೀಗ್‌ಗೆ ಬೆಂಗಳೂರು ಬುಲ್ಸ್ ತಂಡ ಯುವ ಮತ್ತು ಉತ್ಸಾಹಿ ಆಟಗಾರರನ್ನು ಸೇರಿಸಿಕೊಂಡಿದ್ದು, ಸ್ಪರ್ಧಾ ಕಣಕ್ಕಿಳಿಯಲು ತಯಾರಿ ನಡೆಸಿದೆ.

ಹರೀಶ್ ನಾಯ್ಕ, ರೋಹಿತ್, ಗುರ್ವಿಂದರ್ ಸಿಂಗ್, ಅಂಕಿತ್ ಸಾಂಗ್ವಾನ್, ಮಹೇಂದರ್ ಸಿಂಗ್, ಪ್ರೀತಮ್ ಚಿಲ್ಲಾರ್, ರವೀಂದ್ರ ಪಾಹಲ್ (ಉಪನಾಯಕ), ಅಮಿತ್, ರೋಹಿತ್ ಕುಮಾರ್(ನಾಯಕ), ಆಶೀಷ್ ಕುಮಾರ್, ಅಮಿತ್ ಶಿಯೊರಾನ್, ಸಿನೊತ್ರನ್ ಕನೇಶಾರಾಜ್ , ಪ್ರದೀಪ್, ಅಜಯ್ ಕುಮಾರ್, ಸುನೀಲ್ , ಸುಮಿತ್, ಅಂಜಯ್, ಶೀಸ್ತಾ ಮತ್ತು ಕುಲದಿಪ್ ಸಿಂಗ್ ತಂಡದಲ್ಲಿದ್ದಾರೆ.

ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಅರ್ಜುನ್ ಪ್ರಶಸ್ತಿ ಪುರಸ್ಕೃತ ರಣಧೀರ್ ಸಿಂಗ್ ತಂಡದ ಕೋಚ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News