ಝಿಂಬಾಬ್ವೆ ವಿರುದ್ಧ ಏಕೈಕ ಟೆಸ್ಟ್: ಗರಿಷ್ಠ ರನ್‌ ಬೆನ್ನಟ್ಟಿ ಗೆಲುವು ದಾಖಲಿಸಿದ ಶ್ರೀಲಂಕಾ

Update: 2017-07-18 18:15 GMT

ಕೊಲಂಬೊ, ಜು.18: ನಿರೊಶನ್ ಡಿಕ್‌ವೆಲ್ಲಾ ಹಾಗೂ ಅಸೆಲಾ ಗುಣರತ್ನೆ ಅವರ ಹೋರಾಟಕಾರಿ ಅರ್ಧಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಝಿಂಬಾಬ್ವೆ ನೀಡಿದ್ದ 388 ರನ್ ಗುರಿಯನ್ನು ಬೆನ್ನಟ್ಟಿ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಏಕೈಕ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ತಂಡ ಅಂತಿಮ ದಿನವಾದ ಮಂಗಳವಾರ ಗುಣರತ್ನೆ(ಅಜೇಯ 80) ಹಾಗೂ ಡಿಕ್‌ವೆಲ್ಲಾ(81) ಆರನೆ ವಿಕೆಟ್‌ಗೆ ಸೇರಿಸಿದ 121 ರನ್ ಜೊತೆಯಾಟದ ನೆರವಿನಿಂದ ಗೆಲುವಿನ ದಡ ಸೇರಿತು.

ಶ್ರೀಲಂಕಾ 2006ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 352 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಶ್ರೀಲಂಕಾದ ನೂತನ ಟೆಸ್ಟ್ ನಾಯಕ ದಿನೇಶ್ ಚಾಂಡಿಮಾಲ್‌ಗೆ ಈ ಗೆಲುವು ಹೊಸ ಹುಮ್ಮಸ್ಸು ನೀಡಿದೆ. ಏಕದಿನ ಸರಣಿಯಲ್ಲಿ ಝಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾಕ್ಕೆ ಈ ಗೆಲುವು ಆತ್ಮವಿಶ್ವಾಸವನ್ನು ನೀಡಿದೆ.

ಆರ್.ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಝಿಂಬಾಬ್ವೆ ನಾಯಕ ಗ್ರೆಮ್ ಕ್ರಿಮರ್ 275 ರನ್ ನೀಡಿ 9 ವಿಕೆಟ್ ಕಬಳಿಸಿದರು.
 ಡಿಕ್‌ವೆಲ್ಲಾ ಔಟಾದ ಬಳಿಕ ದಿಲ್‌ರುವಾನ್ ಪೆರೇರ(ಅಜೇಯ 29) ಅವರೊಂದಿಗೆ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದ ಗುಣರತ್ನೆ ತಂಡದ ಗೆಲುವಿನ ರೂವಾರಿಯಾದರು. ಈ ಸಾಹಸಕ್ಕೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

 ಗುಣರತ್ನೆ 151 ಎಸೆತಗಳಲ್ಲಿ 6 ಬೌಂಡರಿ ಸಹಿತ ಔಟಾಗದೆ 81 ರನ್ ಗಳಿಸಿದರು. 37 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಡಿಕ್‌ವೆಲ್ಲಾ 81 ರನ್(118 ಎಸೆತ, 6 ಬೌಂಡರಿ) ಗಳಿಸಿ ವಿಲಿಯಮ್ಸ್‌ಗೆ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್

►ಝಿಂಬಾಬ್ವೆ ಮೊದಲ ಇನಿಂಗ್ಸ್: 356
►ಶ್ರೀಲಂಕಾ ಮೊದಲ ಇನಿಂಗ್ಸ್: 346
►ಝಿಂಬಾಬ್ವೆ ಎರಡನೆ ಇನಿಂಗ್ಸ್: 377
►ಶ್ರೀಲಂಕಾ ಎರಡನೆ ಇನಿಂಗ್ಸ್: 391/6
(ಡಿಕ್‌ವೆಲ್ಲಾ 81, ಗುಣರತ್ನೆ ಅಜೇಯ 80, ಮೆಂಡಿಸ್ 66, ಕರುಣರತ್ನೆ 49, ಪೆರೇರ ಅಜೇಯ 29,ಕ್ರಿಮರ್ 4-150.
►ಪಂದ್ಯಶ್ರೇಷ್ಠ: ಗುಣರತ್ನೆ
►ಸರಣಿಶ್ರೇಷ್ಠ: ರಂಗನ ಹೆರಾತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News