×
Ad

ಆಗಸ್ಟ್ 5ಕ್ಕೆ ಅಖಿಲ್ ಕುಮಾರ್, ಜಿತೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ

Update: 2017-07-19 23:51 IST

ಮುಂಬೈ, ಜು.19: ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಅಖಿಲ್ ಕುಮಾರ್ ಹಾಗೂ ಜಿತೇಂದರ್ ಸಿಂಗ್ ಕೊನೆಗೂ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆಗೈಯುವ ದಿನ ನಿಗದಿಯಾಗಿದೆ.

 ಈ ಇಬ್ಬರು ಬಾಕ್ಸರ್‌ಗಳು ಆಗಸ್ಟ್ 5 ರಂದು ಚೊಚ್ಚಲ ವೃತ್ತಿಪರ ಬಾಕ್ಸಿಂಗ್ ಪಂದ್ಯವನ್ನಾಡಲಿದ್ದಾರೆ. ಅಖಿಲ್ ಆಸ್ಟ್ರೇಲಿಯದ ಬಾಕ್ಸರ್ ಟೈ ಗಿಲ್‌ಕ್ರಿಸ್ಟ್‌ರನ್ನು ಎದುರಿಸಲಿದ್ದಾರೆ. ಜಿತೇಂದರ್ ಥಾಯ್ಲೆಂಡ್‌ನ ಥಾನೆಟ್ ಲಿಖಿತ್‌ಕಾಂಪಾರ್ನ್‌ರನ್ನು ಎದುರಿಸಲಿದ್ದಾರೆ.

 ಅಖಿಲ್ ಎದುರಾಳಿ ಗಿಲ್‌ಕ್ರಿಸ್ಟ್ 2010ರಲ್ಲಿ ಪ್ರೊ ಬಾಕ್ಸಿಂಗ್‌ಗೆ ಕಾಲಿಟ್ಟಿದ್ದಾರೆ. ಈತನಕ 13 ಬಾಕ್ಸಿಂಗ್ ಪಂದ್ಯಗಳನ್ನಾಡಿದ್ದು, ಈ ಪೈಕಿ ಆರರಲ್ಲಿ ಜಯ ಸಾಧಿಸಿದ್ದಾರೆ. 36ರ ಹರೆಯದ ಅಖಿಲ್ ತನ್ನ ಅಮೆಚೂರ್ ಬಾಕ್ಸಿಂಗ್‌ನಲ್ಲಿ 250 ಪಂದ್ಯಗಳನ್ನು ಆಡಿದ್ದಾರೆ. ಜೂನಿಯರ್ 63 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಆಡಲಿದ್ದಾರೆ.
ಜಿತೇಂದರ್ ಎದುರಾಳಿ ಲಿಖಿತ್‌ಕಾಂಪಾರ್ನ್ ಈವರ್ಷ ಪ್ರೊ ಬಾಕ್ಸಿಂಗ್‌ಗೆ ಕಾಲಿಟ್ಟಿದ್ದಾರೆ. ಈ ಇಬ್ಬರು ಆಟಗಾರರು 61 ಕೆಜಿ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News