ಕಾಮನ್‌ವೆಲ್ತ್ ಯೂತ್ ಗೇಮ್ಸ್: ಭಾರತಕ್ಕೆ ಚಿನ್ನ ಸಹಿತ ನಾಲ್ಕು ಪದಕ

Update: 2017-07-19 18:24 GMT

ಹೊಸದಿಲ್ಲಿ, ಜು.19: ಬಹಾಮಸ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಭಾರತೀಯ ಜೂನಿಯರ್ ಜುಡೋಪಟುಗಳು ಒಂದು ಚಿನ್ನ ಹಾಗೂ ಮೂರು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

73 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯದ ನಿಕೊಲಿಕ್ ಉರೊಸ್‌ರನ್ನು ಮಣಿಸಿದ ಹರ್ಯಾಣದ ಸೋನಿ ಚಿನ್ನದ ಪದಕ ಜಯಿಸಿದರು.
 60 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಝೈನ್ ಪ್ರೊಸರ್ ಹ್ಯಾರಿ ಅವರನ್ನು ಮಣಿಸಿದ ಆಶೀಷ್ ಕಂಚು ಜಯಿಸಿದರು. ಮಧ್ಯಪ್ರದೇಶದ ಅಂತಿಮ್ ಯಾದವ್ 48 ಕೆಜಿ ವಿಭಾಗದಲ್ಲಿ ಬಹಾಮಸ್‌ನ ರಸ್ಸೆಲ್ ಜಾಸ್ಮಿನ್‌ರನ್ನು ಮಣಿಸಿ ಭಾರತಕ್ಕೆ 2ನೆ ಕಂಚು ಗೆದ್ದುಕೊಟ್ಟರು.

ಮಣಿಪುರದ ರೆಬಿನಾ ದೇವಿ 57ಕೆಜಿ ತೂಕ ವಿಭಾಗದಲ್ಲಿ ಆಸ್ಟ್ರೇಲಿಯದ ಸಾಸ್ಕಿಯಾರನ್ನು ಮಣಿಸುವ ಮೂಲಕ ಭಾರತಕ್ಕೆ 3ನೆ ಕಂಚು ಗೆದ್ದುಕೊಟ್ಟಿದ್ದಾರೆ.
ಗೇಮ್ಸ್ ಆಯೋಜನಾ ಸಮಿತಿಯು ಪ್ರತಿದೇಶದ ನಾಲ್ವರು ಜುಡೋ ಆಟಗಾರರಿಗೆ ಕೇವಲ ನಾಲ್ಕು ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಭಾರತದ ಎಲ್ಲ ಸ್ಪರ್ಧಿಗಳು ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News