ರಶ್ಯದ 8 ಅಥ್ಲೀಟ್‌ಗಳ ಸ್ಪರ್ಧೆಗೆ ಐಎಎಎಫ್ ಅವಕಾಶ

Update: 2017-07-20 18:21 GMT

ರೋಮ್, ಜು.20: ರಾಜ್ಯ ಪ್ರಾಯೋಜಿತ ಡೋಪಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದಲ್ಲಿ ರಶ್ಯದ ಇಡೀ ಅಥ್ಲೀಟ್ ತಂಡವನ್ನು ನಿಷೇಧಿಸಿದ 20 ತಿಂಗಳ ಬಳಿಕ ಐಎಎಎಫ್ ಗುರುವಾರ ರಶ್ಯದ 8 ಅಥ್ಲೀಟ್‌ಗಳಿಗೆ ತಟಸ್ಥ ಧ್ವಜದಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ.

 ಐಎಎಎಫ್ ಡೋಪಿಂಗ್ ಪರಾಮರ್ಶೆ ಮಂಡಳಿಯಲ್ಲಿ ಅನುಮತಿಗಾಗಿ ಮನವಿ ಸಲ್ಲಿಸಿದ ಬಳಿಕ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಪಡೆದಿರುವ ರಶ್ಯದ ಅಥ್ಲೀಟ್‌ಗಳ ಪೈಕಿ 2015ರಲ್ಲಿ ಬೀಜಿಂಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5ನೆ ಸ್ಥಾನ ಪಡೆದಿದ್ದ ಹ್ಯಾಮರ್ ಎಸೆತಗಾರ್ತಿ ಸೆರ್ಜಿಜ್ ಲಿಟ್‌ವಿನೊವ್ ಅವರಿದ್ದಾರೆ. ರಶ್ಯದ ಅಥ್ಲೀಟ್‌ಗಳಿಗೆ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿತ್ತು. ಲಂಡನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ರಶ್ಯದ ಅಥ್ಲೀಟ್‌ಗಳಿಗೆ ಭಾಗವಹಿಸುವ ಅವಕಾಶ ಇಲ್ಲ. ರಶ್ಯದ ಕ್ರೀಡಾವಲಯದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ವ್ಯಾಪಕವಾಗಿ ಡೋಪಿಂಗ್ ನಡೆಯುತ್ತಿದೆ ಎಂದು 2015ರ ಸ್ವತಂತ್ರ ವರದಿಯಲ್ಲಿ ಬಹಿರಂಗವಾದ ಬಳಿಕ ರಶ್ಯದ ಅಥ್ಲೀಟ್‌ಗಳಿಗೆ ನಿಷೇಧ ಹೇರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News