ಇಂಗ್ಲೆಂಡ್ ವಿಶ್ವ ಚಾಂಪಿಯನ್: ಭಾರತಕ್ಕೆ ವೀರೋಚಿತ ಸೋಲು
Update: 2017-07-23 22:49 IST
ಲಾರ್ಡ್ಸ್ , ಜು.23: ಅತ್ಯಂತ ಕುತೂಹಲ ಕೆರಳಿಸಿರುವ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಭಾರತ 9 ರನ್‌ಗಳ ವಿರೋಚಿತ ಸೋಲು ಅನುಭವಿಸಿದೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್‌ನಲ್ಲಿ ಗೆಲುವಿಗೆ 229 ರನ್‌ಗಳ ಸವಾಲನ್ನು ಪಡೆದ ಭಾರತ 48.4 ಓವರ್‌ಗಲ್ಲಿ 219 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ. ಇದರೊಂದಿಗೆ ಇಂಗ್ಲೆಂಡ್ ನಾಲ್ಕನೆ ಬಾರಿ ವಿಶ್ವ ಚಾಂಪಿಯನ್ ಆಗಿದೆ
ಭಾರತದ ಪರ ಪೂನಮ್ ರಾವುತ್ 86 ರನ್, ಹರ್ಮನ್ ಪ್ರೀತ್ ಕೌರ್ 51 ರನ್ , ವೇದ ಕೃಷ್ಣ ಮೂರ್ತಿ 35 ರನ್ ಗಳಿಸಿ ಹೋರಾಟ ನಡೆಸಿದರೂ ಅವರ ಹೋರಾಟದಿಂದ ತಂಡ ಗೆಲುವಿನ ದಡ ಸೇರಲಿಲ್ಲ. ಇಂಗ್ಲೆಂಡ್‌ನ ಅನ್ಯ ಶ್ರುಬೊಸ್ಲೆ 46ಕ್ಕೆ 6 ವಿಕೆಟ್ ಉಡಾಯಿಸು ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 228 ರನ್ ಗಳಿಸಿತ್ತು