ಇಟಲಿ ಫುಟ್ಬಾಲ್ ಆಟಗಾರ ಕ್ಯಾಸಾನೊ ನಿವೃತ್ತಿ

Update: 2017-07-25 17:58 GMT

ಮಿಲನ್, ಜು.25: ಇಟಲಿಯ ಅತ್ಯಂತ ಕೌಶಲ್ಯಪೂರ್ಣ, ವರ್ಣರಂಜಿತ ಹಾಗೂ ವಿವಾದಾತ್ಮಕ ಫುಟ್ಬಾಲ್ ಆಟಗಾರ ಅಂಟೋನಿಯೊ ಕ್ಯಾಸಾನೊ ವಾರದೊಳಗೆ ಎರಡನೆ ಬಾರಿ ನಿವೃತ್ತಿ ಘೋಷಿಸಿದ್ದಾರೆ.

35ರ ಹರೆಯದ ಕ್ಯಾಸಿನೊ ವೃತ್ತಿಜೀವನದಲ್ಲಿ ಅಶಿಸ್ತು ಹಾಗೂ ಭಾರದ ಸಮಸ್ಯೆಯಿಂದಲೇ ಸುದ್ದಿಯಾಗಿದ್ದರು. ಕಳೆದ ಮಂಗಳವಾರ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದ ಕ್ಯಾಸಿನೊ ಸೋಮವಾರ ಮತ್ತೊಮ್ಮೆ ಟ್ವಿಟರ್ ಪೇಜ್‌ನಲ್ಲಿ ಎರಡನೆ ಬಾರಿ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.

ನಾನು ಇನ್ನು ಮುಂದೆ ಫುಟ್ಬಾಲ್ ಆಡುವುದಿಲ್ಲ. ನನ್ನ ಮಕ್ಕಳು ಹಾಗೂ ಮಡದಿಯೊಂದಿಗೆ ಸಮಯ ಕಳೆಯಲು ಬಯಸಿದ್ದೇನೆ ಎಂದು ಕ್ಯಾಸಿನೊ ಟ್ವೀಟ್ ಮಾಡಿದ್ದಾರೆ.

ಇಟಲಿಯ ನಗರ ಬಾರಿಯಲ್ಲಿ ಜನಿಸಿರುವ ಕ್ಯಾಸಿನೊ ಅವರು ರಿಯಲ್ ಮ್ಯಾಡ್ರಿಡ್, ಎಸಿ ಮಿಲನ್, ಇಂಟರ್ ಮಿಲನ್ ಹಾಗೂ ಪಾರ್ಮಾ ಕ್ಲಬ್‌ಗಳಲ್ಲಿ ಆಡಿದ್ದಾರೆ. ಹೆಚ್ಚು ಆಹಾರ ಸೇವಿಸಲು ಇಷ್ಟಪಡುವ ಕ್ಯಾಸಿನೊ ವೃತ್ತಿಜೀವನದಲ್ಲಿ ತೂಕದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದರು.

ಕ್ಯಾಸಿನೊ ಇಟಲಿಯ ಪರ 39 ಪಂದ್ಯಗಳನ್ನು ಆಡಿದ್ದು, 2004 ಹಾಗೂ 2012ರ ಯುರೋ ಕಪ್‌ನಲ್ಲಿ ಆಡಿದ್ದರು. 2012ರಲ್ಲಿ ಇಟಲಿ ತಂಡ ಫೈನಲ್‌ಗೆ ತಲುಪಲು ನೆರವಾಗಿದ್ದರು. 2011ರಲ್ಲಿ ಲಘು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News