ವಿಶ್ವ ಈಜು ಚಾಂಪಿಯನ್‌ಶಿಪ್: ಆ್ಯಡಮ್ ಪೀಟಿ ವಿಶ್ವ ದಾಖಲೆ

Update: 2017-07-25 18:18 GMT

ಬುಡಾಪೆಸ್ಟ್, ಜು.25: ವಿಶ್ವ ಈಜು ಚಾಂಪಿಯನ್‌ಶಿಪ್‌ನ ಹೀಟ್ಸ್‌ನಲ್ಲಿ ಬ್ರಿಟನ್‌ನ ಆಡಮ್ ಪೀಟಿ ಪುರುಷರ 50 ಮೀ. ಬ್ರೀಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ತನ್ನದೇ ವಿಶ್ವ ದಾಖಲೆಯನ್ನು ಮುರಿದು ಗಮನ ಸೆಳೆದರು.

22ರ ಹರೆಯದ ಪೀಟಿ 26.10 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಎರಡು ವರ್ಷಗಳ ಹಿಂದೆ ರಶ್ಯದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಾನೇ ನಿರ್ಮಿಸಿದ್ದ (26.42)ದಾಖಲೆಯನ್ನು ಮುರಿದರು.

ಸೋಮವಾರ ರಾತ್ರಿ ಪುರುಷರ 100 ಮೀ. ಬ್ರಿಸ್ಟ್ರೋಕ್‌ನಲ್ಲಿ ಜಯ ಶಾಲಿಯಾಗಿದ್ದ ಪೀಟಿ ಮಂಗಳವಾರ ರಾತ್ರಿ ತನ್ನದೇ ವಿಶ್ವದಾಖಲೆಯನ್ನು ಮುರಿದು ಸೆಮಿಫೈನಲ್‌ಗೆ ಅರ್ಹತೆ ಪಡೆದರು.

‘‘ನಾನು ವಿಶ್ವದಾಖಲೆಗಾಗಿ ಸ್ಪರ್ಧಿಸಲಲ್ಲ. ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದೇನೆ’’ ಎಂದು ಪೀಟಿ ಪ್ರತಿಕ್ರಿಯಿಸಿದರು.

ಪೀಟಿ ತನ್ನ ವೃತ್ತಿಜೀವನದಲ್ಲಿ ಮೂರನೆ ಬಾರಿ 50 ಮೀ.ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News