ಆಂಧ್ರ ಸರಕಾರದ ಡೆಪ್ಯುಟಿ ಕಲೆಕ್ಟರ್ ಆಗಿ ಸಿಂಧು

Update: 2017-07-27 18:22 GMT

ಅಮರಾವತಿ, ಜು.27: ಭಾರತದ ಸ್ಟಾರ್ ಶಟ್ಲರ್ ಹಾಗೂ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಆಂಧ್ರ ಪ್ರದೇಶ ಸರಕಾರದ ಪ್ರಥಮ ಶ್ರೇಣಿಯ ಸೇವಾ ಹುದ್ದೆ ಡೆಪ್ಯುಟಿ ಕಲೆಕ್ಟರ್ ಆಗಿ ಗುರುವಾರ ನೇಮಕಗೊಂಡಿದ್ದಾರೆ.

ಇಲ್ಲಿನ ಸಚಿವಾಲಯದಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಸರಕಾರದ ನೇಮಕಾತಿಯ ಆದೇಶದ ಪ್ರತಿಯನ್ನು ಸಿಂಧುಗೆ ಹಸ್ತಾಂತರಿಸಿದರು. ‘‘ನನ್ನ ಗಮನ ಕ್ರೀಡೆಯತ್ತ ಮಾತ್ರ. ಕ್ರೀಡೆಯೇ ನನ್ನ ಮೊದಲ ಆದ್ಯತೆಯಾಗಿದೆ’’ ಎಂದು ಹೇಳಿದ ಸಿಂಧು ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕಗೊಳಿಸಿದ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು. ಸಿಂಧು ಕಳೆದ ವರ್ಷ ರಿಯೋ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಸಂದರ್ಭದಲ್ಲಿ ಆಂಧ್ರ ಸರಕಾರ 3 ಕೋ.ರೂ. ಬಹುಮಾನ, ಅಮರಾವತಿಯಲ್ಲಿ 1,000 ಚದರ ಅಡಿ ನಿವೇಶನ ಹಾಗೂ ಸರಕಾರಿ ಹುದ್ದೆಯನ್ನು ನೀಡುವುದಾಗಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News