ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2017-07-27 18:28 GMT

ಚೆಸ್ಟರ್‌ಫೀಲ್ಡ್, ಜು.27: ಮನೋಜ್ ಕಾಲ್ರಾ ಶತಕ ಹಾಗೂ ಕಮಲೇಶ್ ನಾಗರಕೋಟಿ ಗಳಿಸಿದ 10 ವಿಕೆಟ್‌ಗಳ ಗೊಂಚಲು ನೆರವಿನಿಂದ ಭಾರತದ ಅಂಡರ್-19 ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ 334 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ಹಾರ್ವಿಕ್ ದೇಸಾಯಿ(89) ಹಾಗೂ ಮಂಜೊತ್(122) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 519 ರನ್ ಗಳಿಸಿ ಆಲೌಟಾಯಿತು.

ಪೃಥ್ವಿ ಶಾ(86) ಹಾಗೂ ರಿಯಾನ್ ಪರಾಗ್‌ದಾಸ್(68) ಅರ್ಧಶತಕದ ಕೊಡುಗೆ ನೀಡಿದರು. ಇಂಗ್ಲೆಂಡ್‌ನ ಪರ ಜೋಶ್ ಟಾಂಗ್(3-69), ಹೆನ್ರಿ ಬ್ರೂಕ್ಸ್(3-85) ಹಾಗೂ ಅಮರ್ ವಿರ್ದಿ(3-134) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಭಾರತದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟ ಇಂಗ್ಲೆಂಡ್ ತಂಡ ನಾಗರಕೋಟಿ ಹಾಗೂ ಶಿವಂ ಅವರ ಬೌಲಿಂಗ್ ದಾಳಿಗೆ ತತ್ತರಿಸಿ 54.2 ಓವರ್‌ಗಳಲ್ಲಿ ಕೇವಲ 195 ರನ್‌ಗೆ ಆಲೌಟಾಯಿತು.

ಜಾಕ್ಸ್(46) ಇಂಗ್ಲೆಂಡ್‌ನ ಪರ ಗರಿಷ್ಠ ಸ್ಕೋರ್ ಗಳಿಸಿದರು. ನಾಯಕ ಮ್ಯಾಕ್ಸ್ ಹೋಲ್ಡನ್(32) ಹಾಗೂ ರಿಯಾನ್ ಪಟೇಲ್(38) ಉಪಯುಕ್ತ ಕೊಡುಗೆ ನೀಡಿದರು.

ಭಾರತದ ದ್ವಿತೀಯ ಇನಿಂಗ್ಸ್‌ನಲ್ಲಿ ಪೃಥ್ವಿ ಶಾ(69) ಹಾಗೂ ದಾಸ್(50) ಮತ್ತೊಮ್ಮೆ ಅರ್ಧಶತಕ ಬಾರಿಸಿದರು. ಭಾರತ 6 ವಿಕೆಟ್‌ಗೆ 173 ರನ್ ಗಳಿಸಿ ಎರಡನೆ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಗೆಲುವಿಗೆ 497 ರನ್ ಗುರಿ ನೀಡಿತು.

 ಗೆಲ್ಲಲು ಕಠಿಣ ಸವಾಲು ಬೆನ್ನಟ್ಟಿದ ಇಂಗ್ಲೆಂಡ್ 46.1 ಓವರ್‌ಗಳಲ್ಲಿ 163 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಹೋಲ್ಡರ್(60) ಅರ್ಧಶತಕ ಬಾರಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್

►ಭಾರತ ಅಂಡರ್-19 ತಂಡ: 519, 173/6 ಡಿಕ್ಲೇರ್
►ಇಂಗ್ಲೆಂಡ್ ಅಂಡರ್-19 ತಂಡ: 195, 163

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News