ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಕೊಹ್ಲಿ 50ಕ್ಕಿಂತ ಹೆಚ್ಚು ರನ್ ಸರಾಸರಿ ಸಾಧನೆ
Update: 2017-07-29 22:00 IST
ಗಾಲೆ, ಜು.29: ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಔಟಾಗದೆ 103 ರನ್ ದಾಖಲಿಸಿದ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ರನ್ ದಾಖಲೆಯಲ್ಲಿ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ವಿಶ್ವದ ಮೊದಲ ದಾಂಡಿಗನೆಂಬ ಹೊಸ ದಾಖಲೆ ಬರೆದಿದ್ದಾರೆ.
ಟೆಸ್ಟ್‌ನಲ್ಲಿ ಈ ಮೊದಲು 49.41 ರನ್ ಸರಾಸರಿ ಹೊಂದಿದ್ದರು. ಗಾಲೆ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 3 ಎರಡನೆ ಇನಿಂಗ್ಸ್‌ನಲ್ಲಿ 103 ರನ್ ಸೇರಿದಂತೆ 106 ರನ್ ಕಲೆ ಹಾಕಿರುವ ಕೊಹ್ಲಿ ಟೆಸ್ಟ್‌ನಲ್ಲಿ ರನ್ ಸರಾಸರಿಯನ್ನು 50.03ಕ್ಕೆ ಏರಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 54.68 ಮತ್ತು ಟ್ವೆಂಟಿ- 20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 52.96 ಸರಾಸರಿ ರನ್ ದಾಖಲಿಸಿದ್ದಾರೆ.