×
Ad

ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಭಾರತ ತಂಡ ಪಯಣ

Update: 2017-07-29 23:58 IST

ಹೊಸದಿಲ್ಲಿ, ಜು.29: ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು 24 ಸದಸ್ಯರನ್ನು ಒಳಗೊಂಡ ಭಾರತ ತಂಡ ಫಿನ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದೆ. ಪುರುಷರ ಫ್ರೀಸ್ಟೈಲ್, ಮಹಿಳೆಯರ ಕುಸ್ತಿ ಹಾಗೂ ಗ್ರಿಕೊ-ರೊಮನ್ ವಿಭಾಗಗಳಲ್ಲಿ ತಲಾ 8 ಸದಸ್ಯರಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಆ.1 ರಿಂದ 4ರ ತನಕ ನಡೆಯಲಿದೆ.

ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪ್ರತಿನಿಧಿಸುವ ಕುಸ್ತಿಪಟುಗಳ ಆಯ್ಕೆಗೆ ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಈ ತಿಂಗಳಾರಂಭದಲ್ಲಿ ಜೂನಿಯರ್ ಕುಸ್ತಿಪಟುಗಳ ಆಯ್ಕೆ ಟ್ರಯಲ್ಸ್ ನಡೆಸಿತ್ತು.

ಇತ್ತೀಚೆಗೆ ನಡೆದಿದ್ದ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೀಪಕ್ ಪೂನಿಯಾ, ಕರಣ್, ಸಾಜನ್, ಸುನೀಲ್ ಕುಮಾರ್, ಪೂಜಾ ಗಹ್ಲೋಟ್, ರೇಶ್ಮಾ ಮಾನೆ, ಮಂಜು ಕುಮಾರಿ ಹಾಗೂ ಪೂಜಾ ಉತ್ತಮ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News