ದ್ವಿತೀಯ ಟೆಸ್ಟ್: ಭಾರತ 622/9 ರನ್‌ಗೆ ಡಿಕ್ಲೇರ್

Update: 2017-08-04 11:32 GMT

ಕೊಲಂಬೊ, ಆ.4: ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವೃದ್ದಿಮಾನ್ ಸಹಾ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 622 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

 ಎರಡನೆ ದಿನವಾದ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 344 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ಅಶ್ವಿನ್(54), ಸಹಾ(67) ಹಾಗೂ ಜಡೇಜ(ಅಜೇಯ 70) ಸಾಹಸದ ನೆರವಿನಿಂದ ಸರಣಿಯಲ್ಲಿ ಸತತ ಎರಡನೆ ಬಾರಿ ಮೊದಲ ಇನಿಂಗ್ಸ್‌ನಲ್ಲಿ 600ಕ್ಕೂ ಅಧಿಕ ರನ್ ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.

ಶತಕವೀರರಾದ ಚೇತೇಶ್ವರ ಪೂಜಾರ(133) ಹಾಗೂ ರಹಾನೆ(132) ಔಟಾದ ಬಳಿಕ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ ಸಹಾ, ಅಶ್ವಿನ್ ಹಾಗೂ ಜಡೇಜ ಶ್ರೀಲಂಕಾ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು.

 ಶ್ರೀಲಂಕಾದ ಪರ ಹಿರಿಯ ಸ್ಪಿನ್ನರ್ ರಂಗನ ಹೆರಾತ್ 154 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಪುಷ್ಪಕುಮಾರ್(2-156) ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News